ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಇಂದು (ಆ.21) ಕನಕಾಭಿಷೇಕ ಮತ್ತು ತುಲಾಭಾರ ನೆರವೇರಿಸಲಾಯಿತು.
ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್.ಗಣೇಶ್ ಮತ್ತವರ ಪುತ್ರ ಎಸ್. ಬಿ.ಅಭಿಷೇಕ್ ಅವರು ಕುಟುಂಬ ಸದಸ್ಯರರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಮನೂರು ಶಿವಶಂಕರಪ್ಪ ಅವರು ನಾಲ್ಕನೇ ತಲೆಮಾರು ಕಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಂದು ಬೆಳಿಗ್ಗೆ ಎಸ್. ಎಸ್.ಗಣೇಶ್ ಅವರ ಮನೆಯಲ್ಲಿ ದೇಶದ ಇಪ್ಪತ್ತೊಂದು ನದಿಗಳಿಂದ ತಂದಿದ್ದ ನೀರಿನಲ್ಲಿ ಶಾಮನೂರು ಶಿವಶಂಕರಪ್ಪನವರಿಗೆ ಅಭಿಷೇಕ ಮಾಡಿ ನಂತರ ಕನಕ(ಬಂಗಾರ) ವೃಷ್ಠಿ ಮಾಡಲಾಯಿತು.
ನಂತರ ಎಸ್.ಎಸ್.ಮಹಲ್ ನಲ್ಲಿ ತುಲಾಭಾರ ನಡೆಸಿದ ಗಣೇಶ್ ಮತ್ತು ಅಭಿಷೇಕ್ ಕುಟುಂಬದವರೊಂದಿಗೆ ಶಾಮನೂರು ಶಿವಶಂಕರಪ್ಪನವರ ಪುತ್ರರಾದ ಎಸ್.ಎಸ್.ಬಕ್ಕೇಶ್ , ಎಸ್.ಎಸ್.ಮಲ್ಲಿಕಾರ್ಜುನ, ಪುತ್ರಿಯರಾದ ಮಂಜುಳಾ ಶಿವಶಂಕರ್, ಅಪರ್ಣಾ ಭಟ್ಟಾಚಾರ್ಯ, ಸುಧಾ ರಾಜೇಂದ್ರ ಪಾಟೀಲ್, ಮೀನಾ ಶರಣ ಪ್ರಕಾಶ್ ಪಾಟೀಲ್ ಇದ್ದರು.
ಶಾಮನೂರು ಶಿವಶಂಕರಪ್ಪ ಅವರ ಸಂಬಂಧಿಕರಾದ ಜಗದೀಶ್ ಶೆಟ್ಟರ್, ಎಂ.ಬಿ.ಪಾಟೀಲ್ ಕುಟುಂಬ ಸಮೇತರಾಗಿ ಆಗಮಿಸಿ ಶುಭ ಹಾರಿಸಿದರು. ಇನ್ನು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಂಬಂದಿಕರು, ದಾವಣಗೆರೆ ನಗರದ ಗಣ್ಯ ವ್ಯಕ್ತಿಗಳು ಆಗಮಿಸಿ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಹಾಗೂ ಅವರ ನಾಲ್ಕನೇ ತಲೆಮಾರಿನ ಸದಸ್ಯ ಚಿ.ಸುವೀರ್ ಶಾಮನೂರು ಅವರನ್ನು ಹಾರಿಸಿದರು.



