ದಾವಣಗೆರೆ: ಬಾಪೂಜಿ ಸಂಸ್ಥೆಯ ಮುಖ್ಯಸ್ಥರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷರು, ಹಾಲಿ ಶಾಸಕರು ಹಾಗೂ ಮಾಜಿ ಸಚಿವರಾದ ಡಾ.ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆ ಅಂತ್ಯಕ್ರಿಯೆಗೆ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಇಂದು (ಡಿ.15) ಸಂಜೆ 4.30ಕ್ಕೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತವು ಪಾರ್ಥಿವ ಶರೀರ ಮೆರವಣಿಗೆ ಸಾಗುವ ಮಾರ್ಗ ಮತ್ತು ಸಂಚಾರ ಮಾರ್ಗದ ಕೆಲವು ಬದಲಾವಣೆ ಮಾಡಿ ಆದೇಶಿಸಿದೆ.
ಮಾಹಿತಿಯಂತೆ ದಿನಾಂಕ: 15-12-2025 ರಂದು ಮಾನ್ಯರ ಪಾರ್ಥಿವ ಶರೀರದ ಅಂತಿಮ ಸಾರ್ವಜನಿಕರ ದರ್ಶನಕ್ಕೆ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 11-00 ಗಂಟೆಯಿAದ 03-00 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ಮಿಲ್ ರವರೆಗೆ ವಾಹನದಲ್ಲಿ ಸಾಗಿ ನಂತರ ಅಂತಿಮ ವಿಧಿವಿಧಾನಗಳು ನಡೆಯುವ ಬಗ್ಗೆ ತಿಳಿದು ಬಂದಿರುತ್ತದೆ.
ಈ ಸಂಬಂಧ ದಾವಣಗೆರೆ ನಗರಕ್ಕೆ ವಿವಿಧ ಕಡೆಗಳಿಂದ ಅತಿಗಣ್ಯರು, ಗಣ್ಯರು ಆಗಮಿಸುತ್ತಿದ್ದು ಅಲ್ಲದೇ ವಿವಿಧ ಕಡೆಗಳಿಂದ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನೀರಿಕ್ಷೆ ಇದ್ದು, ಮಾನ್ಯರ ಅಂತಿಮ ದರ್ಶನ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸಾರ್ವಜನಿಕರು ಸಹಕರಿಸಲು ಜಿಲ್ಲಾ ಪೊಲೀಸ್ ವತಿಯಿಂದ ಮನವಿ ಮಾಡಲಾಗಿರುತ್ತದೆ.
ಪಾರ್ಥಿವ ಶರೀರ ಮೆರವಣಿಗೆ ಸಾಗುವ ಮಾರ್ಗ
ಮಾರ್ಗ-1 ಜಿಲ್ಲಾ ಉಸ್ತುವಾರಿ ಸಚಿವರ ಮನೆಯಿಂದ ಹೈಸ್ಕೂಲ್ ಮೈದಾನದವರೆಗೆ. ಜಿಲ್ಲಾ ಉಸ್ತುವಾರಿ ಸಚಿವರ ಮನೆಯಿಂದ- ಸಾಯಿಬಾಬ ದೇವಸ್ಥಾನ- ರೆಡ್ಡಿ ಬಿಲ್ಡಿಂಗ್- ಚರ್ಚ್
ಸರ್ಕಲ್- ಎವಿಕೆ ಕಾಲೇಜ್ ರಸ್ತೆ – ಮಹಾತ್ಮ ಗಾಂಧಿ ಶಾಲೆ ಮುಂಭಾಗ- ರಾಂ ಅಂಡ್ ಕೋ ಹಳೆ ಕೊರ್ಟ ರಸ್ತೆ ಮುಖಾಂತರ- ಹೈಸ್ಕೂಲ್ ಮೈದಾನ.
ಮಾರ್ಗ-2 ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ರೈಸ್‌ಮಿಲ್‌ವರೆಗೆ. ಹಳೇ ಕೋರ್ಟ ಮೈದಾನ- ಎಸಿ ಕ್ರಾಸ್ ಬಲಕ್ಕೆ ರೈಲ್ವೆ ಅಂಡರ್ ಬ್ರಿಡ್ಜ್- ಲಕ್ಷ್ಮಿ ಸರ್ಕಲ್- ಗಡಿಯಾರ ಕಂಬ- ಕಾಯಿಪೇಟೆ- ಬಸವೇಶ್ವರ ದೇವಸ್ಥಾನ ಮುಂಭಾಗದಿಂದ ದೊಡ್ಡಪೇಟೆಗಣೇಶ ದೇವಸ್ಥಾನ- ಎಸ್.ಕೆ.ಪಿ ರಸ್ತೆ-ದುರ್ಗಾಂಬಿಕ ದೇವಾಸ್ಥಾನ-ಹಗೆದಿಬ್ಬಸರ್ಕಲ್ ಬಲಕ್ಕೆ ತಿರುಗಿ-ಕಾಳಿಕಾಂಬ ದೇವಸ್ಥಾನ ರಸ್ತೆ- ಗ್ಯಾಸ್ ಕಟ್ಟೆ ಸರ್ಕಲ್ ಎಡಕ್ಕೆ ತಿರುಗಿ ಬಕ್ಕೆಶ್ವರ ದೇವಸ್ಥಾನದ ಮುಂಭಾಗ- ಎಂ.ಜಿ ಸರ್ಕಲ್-ಹಾಸಭಾವಿ ಸರ್ಕಲ್-ಮದೀನಾ ಆಟೋ ಸ್ಟಾಂಡ್ ಹಳೇ ಬೇತೂರು ರಸ್ತೆ-ಅರಳಿ ಮರ ಸರ್ಕಲ್-ವೆಂಕಟೇಶ್ವರ ಸರ್ಕಲ್-ಬಲಕ್ಕೆ ತಿರುಗಿ ಕಲ್ಲೇಶ್ವರ ರೈಸ್
ಅಂತಿಮ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಈ ಕೆಳಕಂಡ ನಿಯಮ ಪಾಲಿಸಲು ಮನವಿ
1. ಈಗಾಗಲೇ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯರ ಅಂತಿಮ ದರ್ಶನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಸಂಚಾರ ಮಾರ್ಗ ಬದಲಾವಣೆ, ಪಾರ್ಕಿಂಗ್ ಸ್ಥಳಗಳನ್ನು ನಿಗಧಿಪಡಿಸಲಾಗಿರುತ್ತದೆ.
2. ಮಾನ್ಯರ ಅಂತಿಮ ದರ್ಶನಕ್ಕೆ ಆಗಮಿಸುವ ಅಭಿಮಾನಿಗಳು, ಸಾರ್ವಜನಿಕರು ಭಾವದ್ವೇಗಕ್ಕೆ ಒಳಗಾಗದೇ ಶಾಂತಿಯುತವಾಗಿ ಮಾನ್ಯರ ಅಂತಿಮ ದರ್ಶನ ಪಡೆಯುವುದು
3. ಮಾನ್ಯರ ಅಂತಿಮ ದರ್ಶನಕ್ಕೆ ಆಗಮಿಸುವ ಎಲ್ಲಾ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು, ನಿಗಧಿತ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡಬೇಕು.
4. ಅಂತಿಮ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ಗಮನಕ್ಕೆ ತರುವುದು ಹಾಗೂ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಲು ತಿಳಿಸಿದೆ
5. ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಪ್ರಚೋಧನಕಾರಿ ಪೋಸ್ಟರ್ ಗಳು, ಸುಳ್ಳುಸುದಿಗಳು, ಪ್ರಚೋದನಕಾರಿ ಸಂಧೇಶಗಳು ಹಾಗೂ ಯಾವುದೇ ಧರ್ಮದ ವಿರುದ್ದ / ವ್ಯಕ್ತಿಯ ವಿರುದ್ದ ಅವಹೇಳನಕಾರಿ ಪೋಸ್ಟರ್ / ಸಂದೇಶಗಳು ಕಂಡು ಬಂದಲ್ಲಿ ಮತ್ತೊಬ್ಬರಿಗೆ ರವಾನಿಸದೇ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಾಮಾಜಿಕ ಜಾಲತಾಣ ನಿಗಾ ಘಟಕದ ಸಂಖ್ಯೆ -9480803208 ಗೆ ಮಾಹಿತಿ ನೀಡುವುದು.
6. ಮಾನ್ಯರ ಅಂತಿಮ ದರ್ಶನದ ಸಮಯದಲ್ಲಿ ಹಾಗೂ ಎಲ್ಲಾ ಅಂತಿಮ ವಿಧಿವಿಧಾನಗಳ ಸಮಯದಲ್ಲಿ ಶಾಂತಿಯುತವಾಗಿgರಲು ಹಾಗೂ ಪೊಲೀಸರೊಂದಿಗೆ ಸಹಕರಿಸಲು ಕೋರಿದೆ
ಸಂಚಾರ ಮಾರ್ಗ ಬದಲಾವಣೆ
ಪಾರ್ಥಿವ ಶರೀರದ ಅಂತಿಮ ಸಾರ್ವಜನಿಕರ ದರ್ಶನಕ್ಕೆ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಈ ಸಂಬಂಧ ದಾವಣಗೆರೆ ನಗರಕ್ಕೆ ವಿವಿಧ ಕಡೆಗಳಿಂದ ಅತಿಗಣ್ಯರು, ಗಣ್ಯರು ಆಗಮಿಸುತ್ತಿದ್ದು ಅಲ್ಲದೇ ವಿವಿಧ ಕಡೆಗಳಿಂದ ಮಾನ್ಯರ ಅಭಿಮಾನಿಗಳು, ಸಾರ್ವಜನಿಕರು ಆಗಮಿಸುವ ನೀರಿಕ್ಷೆ ಇದ್ದು, ಆದ್ದರಿಂದ ದಾವಣಗೆರೆ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಈ ಕೆಳಕಂಡಂತೆ ಸಂಚಾರ ಮಾರ್ಗಗಳು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಬದಲಾವಣೆ ಮಾಡಲಾಗಿರುತ್ತದೆ ಸಾರ್ವಜನಿಕರು ಸಹಕರಿಸಲು ಜಿಲ್ಲಾ ಪೊಲೀಸ್ ವತಿಯಿಂದ ಮನವಿ ಮಾಡಲಾಗಿರುತ್ತದೆ.
ಬದಲಾವಣೆ ವಿವರ:
1. ದಾವಣಗೆರೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವ ಹಾಗೂ ನಿಲ್ದಾಣದಿಂದ ಹೊರ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಈರುಳ್ಳಿ ಮಾರ್ಕೆಟ್ ಮೂಲಕ ಗಣೇಶ ಹೊಟೇಲ್ ಮಾರ್ಗವಾಗಿ ಅರಳಿಮರ ವೃತ್ತ ಮಾಗನಹಳ್ಳಿ ರಸ್ತೆ ಯಿಂದ ರಿಂಗ್ ರಸ್ತೆ ಗೆ ಸೇರುವುದು ಅಲ್ಲಿಂದ ನೇರವಾಗಿ ಆರ್ ಟಿ ಓ ವೃತ್ತದ ಮೂಲಕ ಸಂಗೋಳ್ಳಿ ರಾಯಣ್ಣ ವೃತ್ತ – ಶಾಮನೂರು ರಸ್ತೆ ಮೂಲಕ ರಾಷ್ಟಿçÃಯ ಹೆದ್ದಾರಿಗೆ ಸೇರುವುದು ಹಾಗೂ ನಗರ ಹೊರಗಡೆ ಹೋಗುವುದು ಹಾಗೂ ಇದೇ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವುದು.
2. ದಾವಣಗೆರೆ ನಗರದಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ನಿಲ್ದಾಣವನ್ನು ದಿನಾಂಕ 15-12-2025 ರಂದು
ತಾತ್ಕಲಿಕವಾಗಿ ನಿಷೇಧಿಸಲಾಗಿರುತ್ತದೆ. ದಾವಣಗೆರೆ ನಗರದಲ್ಲಿ ಎಲ್ಲಾ ಖಾಸಗಿ ಬಸ್‌ಗಳ ಬಸ್ ನಿಲ್ದಾಣಗಳನ್ನು
ತಾತ್ಕಾಲಿಕವಾಗಿ ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ.
ಹೊರಗಡೆಯಿಂದ ದಾವಣಗೆರೆ ನಗರಕ್ಕೆ ಬರುವ ವಾಹನಗಳ ಪಾರ್ಕಿಂಗ್ ಸ್ಥಳಗಳ ವಿವರ.*
1. ಚಿತ್ರದುರ್ಗ ಕಡೆಯಿಂದ ಬಾಡಾ ಕ್ರಾಸ್ ಮೂಲಕ ಬರುವ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುವ ವಾಹನಗಳಿಗೆ ಎಪಿಎಂಸಿ ಮತ್ತು ಚಿಕ್ಕನಹಳ್ಳಿ, ಡಿ ಆರ್ ಆರ್ ಶಾಲಾ ಆವರಣ ಗಳಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.
2. ಹದಡಿ ರಸ್ತೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುವ ವಾಹನಗಳಿಗೆ ಮಾಗನೂರು ಬಸಪ್ಪ ಮೈದಾನ, ಡಿಆರ್‌ಎಂ ಸೈನ್ಸ್ ಕಾಲೇಜ್, ಯು.ಬಿ.ಡಿ.ಟಿ ಇಂಜಿನಿಯರಿAಗ್ ಕಾಲೇಜ್ ಮೈದಾನ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.
3. ರಾಷ್ಟಿçÃಯ ಹೆದ್ದಾರಿ 48 ಶಾಮನೂರು ರಸ್ತೆ ಮೂಲಕ ಬರುವ ವಾಹನಗಳು ಮೋತಿವೀರಪ್ಪ ಹಾಗೂ ಸೆಂಟ್ ಪಾಲ್ಸ್ ಶಾಲಾ ಆವರಣ
4. ಹರಿಹರ (ಬಾತಿ ಮಾರ್ಗವಾಗಿ) ಕಡೆಯಿಂದ ಬರುವ ವಾಹನಗಳು ಅರುಣ ವೃತ್ತದ ಬಳಿ ಇರುವ ವಾಣಿಹೊಂಡ ಶೋ ರೂಂ ಪಕ್ಕದ ಖಾಲಿ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.
5. ಹರಪನಹಳ್ಳಿ ಹಾಗೂ ಜಗಳೂರು ರಸ್ತೆ ಮಾರ್ಗವಾಗಿ ಬರುವ ವಾಹನಗಳು ಜಗಳೂರು ಬಸ್ ನಿಲ್ದಾಣ ಹಾಗೂ ಎಪಿಎಂಸಿ ಮಾರ್ಕೇಟ್ ಆವರಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.
6. ನಗರದಲ್ಲಿ ಮಾನ್ಯರ ಪಾರ್ಥಿವ ಶರೀರ ಸಾಗುವ ಮಾರ್ಗವಾದ: ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಗೃಹದಿಂದ ಗುಂಡಿ ವೃತ್ತ, ವಿದ್ಯಾರ್ಥಿಭವನ, ಅಂಬೇಡ್ಕರ್ ವೃತ್ತ ಮೂಲಕ ಹೈಸ್ಕೂಲ್ ಮೈದಾನದನಕ್ಕೆ ಆಗಮಿಸಿ ಸಾರ್ವಜನಿಕರು ಅಂತಿಮ ದರ್ಶನವಾದ ಬಳಿಕ ಹೈಸ್ಕೂಲ್ ಮೈದಾನದಿಂದ ಪಿಬಿ ರಸ್ತೆ, ಅರುಣ ವೃತ್ತ, ಹೊಂಡದ ವೃತ್ತ, ದುರ್ಗಾಂಭಿಕಾ ದೇವಸ್ಥಾನ, ಹಗದಿಬ್ಬ ವೃತ್ತ ಮೂಲಕ ಬಿ.ಎಸ್ ಚನ್ನಬಸಪ್ಪ ಅಂಗಡಿ ಮಾರ್ಗವಾಗಿ ಚೌಕಿಪೇಟೆ ರಸ್ತೆ, ಜಗಳೂರು ಬಸ್ ನಿಲ್ದಾಣದ ಬಳಿ ಕೆ ಆರ್ ರಸ್ತೆ ಮೂಲಕ ಬಂಬೂಬಜಾರ್ ಲಿಂಕ್ ರಸ್ತೆ ಮೂಲಕ ಸಾಗಿ ಬಂಬೂಬಜಾರ್ ರಸ್ತೆಗೆ ಸೇರಿ ನಂತರ ಅಲ್ಲಿಂದ ಮಟ್ಟಿಕಲ್ಲಿನ ಬಳಿ ಇರುವ ಶ್ರೀ ಕಲ್ಲೇಶ್ವರ ರೈಸ್ ಮಿಲ್ ಮಾರ್ಗಗಳಲ್ಲಿ ಮಾನ್ಯರ ಪಾರ್ಥಿವ ಶರೀರ ಸಾಗುವ ಸಮಯದಲ್ಲಿ ಸದರಿ ಮಾರ್ಗಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
7. ನಗರದಲ್ಲಿ ದಿನಾಂಕ: 15-12-2025 ರಂದು ಎಲ್ಲಾ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ವಿವಿಐಪಿ /ವಿಐಪಿ ಕಾರ್ ಪಾರ್ಕಿಂಗ್ :
ದಾವಣಗೆರೆ ನಗರದ ರೇಣುಕಾ ಮಂದಿರದ ಆವರಣ, ಮಹಾನಗರ ಪಾಲಿಕೆ ಆವರಣ ಹಾಗೂ ರಾಜನಹಳ್ಳಿ ಹನುಮಂತಪ್ಪ ಕಲ್ಯಾಣ ಮಂದಿರದ ಮುಂಭಾಗದ ಸ್ಥಳಗಳಲ್ಲಿ ಅಂತಿಮ ದರ್ಶನಕ್ಕೆ ಆಗಮಿಸುವ ಅತಿಗಣ್ಯರು, ಗಣ್ಯರು ವಾಹನಗಳನ್ನು ನಿಲ್ಲಿಸುವುದು.
ದ್ವಿ ಚಕ್ರ ವಾಹನಗಳು ಪಾರ್ಕಿಂಗ್: ಪಿ ಬಿ ರಸ್ತೆಯ ಹೈಸ್ಕೂಲ್ ಮೈದಾನದ ಬಳಿ ಇರುವ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಖಾಲಿ ಜಾಗ.ನಿಗದಿತ ಸ್ಥಳಗಞಲಲ್ಲಿ ವಾಹನ ನಿಲುಗಡೆ ಮಾಡುವುದು ಕಡ್ಡಾಯವಾಗಿರುತ್ತದೆ.



