ಶುಕ್ರವಾರ ಶಾಮನೂರು ಶಿವಶಂಕರಪ್ಪ ಕೈಲಾಸ ಸಮಾರಾಧನೆ; ಸಂಚಾರ ಮಾರ್ಗದಲ್ಲಿ ಬದಲಾವಣೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ದಾವಣಗೆರೆ: ಶುಕ್ರವಾರ ಕಲ್ಲೆಶ್ವರ ರೈಸ್ ಮಿಲ್ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ರವರ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಬಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪ ಕೈಲಾಸ ಸಮಾರಾಧನೆ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.

ಶಾಮನೂರು ಶಿವಶಂಕರಪ್ಪ ಶಿವಗಣಾರಾಧನೆ; ದಾವಣಗೆರೆ ಇತಿಹಾಸದಲ್ಲೇ ದೊಡ್ಡ ಮಟ್ಟದ ನುಡಿನಮನ ಸಕಲ ಸಿದ್ಧತೆ

ಈ ಸಂಚಾರಿ ಮಾರ್ಗದಲ್ಲಿ ಬದಲಾವಣೆ

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರುಗಳು, ಸಂಸದರು, ಶಾಸಕರುಗಳು ಸೇರಿದಂತೆ ರಾಷ್ಟ್ರೀಯ ಅಧ್ಯಕ್ಷರುಗಳು, ವಿವಿಧ ಮಠಾಧೀಶರು, ಗಣ್ಯರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಂಚರಿಸುವ ಮಾರ್ಗದಲ್ಲಿ ಸಹಜವಾಗಿ ದಿನನಿತ್ಯದಂತೆ ಸಾವಿರಾರು ಲಘು ವಾಹನ ಮತ್ತು ಭಾರಿ ವಾಹನಗಳು ಸಂಚರಿಸುವ ಕಾರಣ ಸುಗಮ ಸಂಚಾರ ವ್ಯವಸ್ಥೆಗೆ ಅಡೆ-ತಡೆ ಉಂಟಾಗಿ ಟ್ರಾಫಿಕ್ ಜಾಮ್ ಆಗಲಿದೆ.

ದಾವಣಗೆರೆ: ಮತ್ತೆ 57 ಸಾವಿರ ಗಡಿದಾಟಿದ ಅಡಿಕೆ ದರ | ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?

ಇದನ್ನು ತಡೆಗಟ್ಟುವ ಸಲುವಾಗಿ ಸುಗಮ ಸಂಚಾರ ವ್ಯವಸ್ಥೆಗಾಗಿ ಬಂದೋಬಸ್ತ್ ಮಾಡಬೇಕಾಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್  ಶುಕ್ರವಾರ ಬೆಳಗ್ಗೆ 06-00 ಗಂಟೆಯಿಂದ ಸಂಜೆ 06-00 ಗಂಟೆವರೆಗೆ ಈ ಕೆಳಕಂಡ ಮಾರ್ಗಗಳಲ್ಲಿ ಭಾರಿ ಮತ್ತು ಲಘು ವಾಹನಗಳನ್ನು ಮಾರ್ಗ ಬದಲಾವಣೆ, ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿ ವಾಹನಗಳು, ಸಾರ್ವಜನಿಕ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಕೆಳಕಂಡಂತೆ ಮಾಡಲಾಗಿದ್ದು ಸಾರ್ವಜನಿಕರು ಸಹಕರಿಸಲು ಕೋರಿದೆ.

ಎಲ್ಲೆಲ್ಲಿ ಸಂಚಾರ ಮಾರ್ಗ ಬದಲಾವಣೆ ..?

1. ಹರಪನಹಳ್ಳಿ ಕಡೆಯಿಂದ ಕಂಚಿಕೆರೆ, ಮಾಗಾನಹಳ್ಳಿ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಹಾಗೂ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‌ಗಳು ಬಿ.ಕಲಪನಹಳ್ಳಿಯಿಂದ ಎಲೆಬೇತೂರು ಗ್ರಾಮದ ಜಗಳೂರು ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದ ರಸ್ತೆ ಮುಖಾಂತರ ಬಸಾಪುರ ಮಾರ್ಗವಾಗಿ ಗಾಣಗಿತ್ತಿ ದೇವಸ್ಥಾನದಿಂದ ಚಿಕ್ಕನಹಳ್ಳಿ ಕ್ರಾಸ್ – ಎ.ಪಿ.ಎಂ.ಸಿ ದನದ ಮಾರ್ಕೆಟ್ ಮುಖಾಂತರ ಹಳೇ ಪಿ.ಬಿ ರಸ್ತೆಯಲ್ಲಿ ಸಂಚರಿಸುವುದು.

2. ಜಗಳೂರು ಕಡೆಯಿಂದ ದಾವಣಗೆರೆ ಕಡೆಗೆ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಹಾಗೂ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‌ಗಳು ಅಣಜಿ ಆನಗೋಡು ಮಾರ್ಗವಾಗಿ ಚಲಿಸಿ ಎನ್.ಹೆಚ್-48 ರಸ್ತೆಯಲ್ಲಿ ಸಂಚರಿಸುವುದು.

3. ದಾವಣಗೆರೆಯಿಂದ ಜಗಳೂರು ಕಡೆಗೆ ಸಂಚರಿಸುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಹಾಗೂ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್‌ಗಳು ಬಾಡಾ ಕ್ರಾಸ್ ಮೂಲಕ ಹೊಸ ಎನ್.ಹೆಚ್-48 ರಸ್ತೆ ಮುಖಾಂತರ ಆನಗೋಡು – ಅಣಜಿ ಮಾರ್ಗವಾಗಿ ಸಂಚರಿಸುವುದು.

4. ಹಳೇ ಪಿ.ಬಿ ರಸ್ತೆ ಈರುಳ್ಳಿ ಮಾರ್ಕೆಟ್ ಮುಖಾಂತರ ಗಣೇಶ ಹೋಟೆಲ್ ಸರ್ಕಲ್ ಕಡೆಗೆ ಸಮಾರಂಭಕ್ಕೆ ಹೋಗುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಮತ್ತು ಪ್ರಯಾಣಿಕ ವಾಹನಗಳ ಸಂಚಾರ ತಾತ್ಕಲಿಕವಾಗಿ ನಿಷೇಧಿಸಲಾಗಿರುತ್ತದೆ.

5. ಎ.ಪಿ.ಎಂ.ಸಿ ಮಾರ್ಕೆಟ್ ಕಡೆಯಿಂದ ವೆಂಕಟೇಶ್ವರ ಸರ್ಕಲ್, ಬೇತೂರು ಹಳ್ಳದ ಕಡೆಗೆ ಸಂಚರಿಸುವ ಸಮಾರಂಭಕ್ಕೆ ಹೋಗುವ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಮತ್ತು ಪ್ರಯಾಣಿಕ ವಾಹನಗಳು ಬಂಬೂಬಜಾರ್ ಮಾರ್ಗವನ್ನು ತಾತ್ಕಲಿಕವಾಗಿ ನಿಷೇಧಿಸಲಾಗಿರುತ್ತದೆ.

ಕಾರ್ಯಕ್ರಮಕ್ಕೆ ಬರುವ ವಾಹನಗಳ ಪಾರ್ಕಿಂಗ್

1. ಚನ್ನಗಿರಿ, ಸಂತೆಬೆನ್ನೂರು ಬೆಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮುಖಾಂತರ ದಿ|| ಶ್ರೀ ಶಾಮನೂರು ಶಿವಶಂಕರಪ್ಪ ಇವರ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕ ವಾಹನಗಳು ಡಿಸಿಎಂ ಅಂಡರ್ ಪಾಸ್, ದನದ ಮಾರುಕಟ್ಟೆ ಕ್ರಾಸ್, ಎಪಿಎಂಸಿ ಬಸವೇಶ್ವರ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದುಕೊಂಡು ಹೊಸ ಚಿಕ್ಕನಹಳ್ಳಿ ಕಾಸ್, ಬಸಾಪುರ ಗ್ರಾಮದಲ್ಲಿ ಆಯ್ದು ಬಸಾಪುರ ರಸ್ತೆಯಲ್ಲಿರುವ ವಿನಾಯಕ ಗೋಡೌನ್ ಪಕ್ಕದ ಕ್ರಾಸ್ ಮುಖಾಂತರ ಬಸ್ ಗಳು ಪಾರ್ಕಿಂಗ್ ಜಾಗಕ್ಕೆ ಹೋಗುವುದು, ಬೈಕ್ ಮತ್ತು ಕಾರುಗಳು ವಿನಾಯಕ ಗೋಡೌನ್ ಹಿಂದೆ ಇರುವ ರಿಂಗ್ ರಸ್ತೆ ಮುಖಾಂರ ಕಾರು ಬೈಕ್ ಪಾರ್ಕಿಂಗ್ ಜಾಗಕ್ಕೆ ಹೋಗವುದು.

2. ಹರಿಹರ ಹರಪನಹಳ್ಳಿ, ಕಡೆಯಿಂದ ಸಮಾರಂಭಕ್ಕೆ ಬರುವ ಸಾರ್ವಜನಿಕ ವಾಹನಗಳು ( ಬಸ್, ಕಾರು, ಬೈಕ್) ಸಂಗೊಳ್ಳಿ ರಾಯಣ್ಣ ಸರ್ಕಲ್, ಆರ್‌ಟಿಒ ಸರ್ಕಲ್, ಅಖ್ತರ್ ರಜಾ ಸರ್ಕಲ್, ಟಿಪ್ಪುಸರ್ಕಲ್, ಬೇತೂರು ಹಳ್ಳದ ಹತ್ತಿರ ಹೊಸದಾಗಿ ನಿಮಿಸಿರುವ ಕಚ್ಚಾ ರಸೆಯ ಮುಖಾಂತರ ಪಾರ್ಕಿಂಗ್ ಸ್ಥಳಕ್ಕೆ ತಲುಪುವುದು.

ಕಾರ್ಯಕ್ರಮಕ್ಕೆ ಬರುವ ವಿಐಪಿ ವಾಹನಗಳು

1. ಚನ್ನಗಿರಿ, ಸಂತೆಬೆನ್ನೂರು ಬೆಂಗಳೂರುಕಡೆಯಿAದ ಬಾಡಾ ಕ್ರಾಸ್ ಮುಖಾಂತರ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮಕ್ಕೆ ಬರುವ ವಿಐಪಿ ವಾಹನಗಳು ಡಿಸಿಎಂ ಅಂಡರ್ ಪಾಸ್, ದನದ ಮಾರುಕಟ್ಟೆ ಕ್ರಾಸ್, ಎಪಿಎಂಸಿ ಬಸವೇಶ್ವರ ದೇವಸ್ಥಾನ, ಗಣೇಶ ಹೋಟೆಲ್ ಸರ್ಕಲ್, ಆರ್‌ಎಂಸಿ ರಸ್ತೆ ಮುಖಾಂತರ ಬಸಾಪುರ ಕ್ರಾಸ್ ನಲ್ಲಿ ಬಲ ತಿರುವು ಪಡೆದುಕೊಂಡು ಕಲ್ಲೇಶ್ವರ ಮಿಲ್ ಹಿಂಭಾಗದ ಲೇಔಟ್ ರಸ್ತೆ ಮುಖಾಂತರ ವಿಐಪಿ ಪಾರ್ಕಿಂಗ್ ಜಾಗಕ್ಕೆ ಹೋಗವುದು.

2. ವಿಐಪಿ ಪಾರ್ಕಿಂಗ್ ಸ್ಥಳದಿಂದ ಹೊರಗಡೆ ಹೋಗುವ ವಾಹನಗಳು ಲೇಔಟ್ ರಸ್ತೆ ಮುಖಾಂತರ ಹೊರಗಡೆ ಬಂದು ಬನ್ನಿಮಹಾಂಕಾಳಿ ದೇವಸ್ಥಾನದ ಹತ್ತಿರ ತಿರುವು ಪಡೆದುಕೊಂಡು ಅಣ್ಣಾ ನರ ಮುಖಾಂತರ ಬಂಬೂ ಬಜಾರ್ ರಸ್ತೆಗೆ ಸೇರಿ ಗಣೇಶ ಹೋಟೆಲ್ ಸರ್ಕಲ್, ಈರುಳ್ಳಿ ಮಾರುಕಟ್ಟೆ ರಸ್ತೆ ಮುಖಾಂತರ ಹಳೇ ಪಿಬಿ ರಸ್ತೆಗೆ ಸೇರುವುದು.

3. ಹರಿಹರ ಹರಪನಹಳ್ಳಿ, ಕಡೆಯಿಂದ ಸಮಾರಂಭಕ್ಕೆ ಬರುವ ವಿಐಪಿ ವಾಹಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಆರ್‌ಟಿಒ ಸರ್ಕಲ್, ಅಖ್ತರ್ ರಜಾ ಸರ್ಕಲ್, ಟಿಪ್ಪುಸರ್ಕಲ್, ಬೇತೂರು ಹಳ್ಳದ ಹತ್ತಿರ ಬಲ ತಿರುವು ಪಡೆದುಕೊಂಡು ವೆಂಕಟೇಶ್ವರ ಸರ್ಕಲ್, ಮಟ್ಟಿಕಲ್ ಮುಂಭಾಗದಿಂದ ಬಸಾಪುರ ಕ್ರಾಸ್ ಎಡತಿರವು ಪಡೆದುಕೊಂಡು ಕಲ್ಲೇಶ್ವರ ಹಿಂಭಾಗದ ಲೇಔಟ್ ರಸ್ತೆ ಮುಖಾಂತರ ವಿಐಪಿ ಪಾರ್ಕಿಂಗ್ ಸ್ಥಳಕ್ಕೆ ತಲುಪುವುದು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *