Connect with us

Dvgsuddi Kannada | online news portal | Kannada news online

ದಾವಣಗೆರೆ: ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಗೆ ಆರ್ ಬಿಐನಿಂದ 10 ಲಕ್ಷ ರೂಪಾಯಿ ದಂಡ

ದಾವಣಗೆರೆ

ದಾವಣಗೆರೆ: ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಗೆ ಆರ್ ಬಿಐನಿಂದ 10 ಲಕ್ಷ ರೂಪಾಯಿ ದಂಡ

ಡಿವಿಜಿ ಸುದ್ದಿ, ದಾವಣಗೆರೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ನಗರದ  ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಗ 10 ಲಕ್ಷ ಹಾಗೂ ತಮಿಳುನಾಡಿನ ತೂತ್ತುಕುಡಿಯಲ್ಲಿರುವ ತಿರುವೈಕುಂಠಂ ಕೋ ಆಪರೇಟಿವ್ ಬ್ಯಾಂಕ್ ಗೆ 5 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಬ್ಯಾಂಕ್ ಗಳಿಗೆ ಇರುವ ನಿಯಮಾವಳಿ ಅನುಸರಿಸದ ಕಾರಣಕ್ಕೆ ದಾವಣಗೆರೆಯ ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಗೆ ಹತ್ತು ಲಕ್ಷ ರುಪಾಯಿ ದಂಡ ಹಾಕಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಈ ದಂಡವನ್ನು ಹಾಕಿರುವುದು ನಿಯಮಾವಳಿಗೆ ಬದ್ಧವಿಲ್ಲದೆ ಕಾರಣಕ್ಕೆ ಹೊರತು ಬ್ಯಾಂಕ್ ಗ್ರಾಹಕರ ಜತೆಗಿನ ಯಾವುದೇ ವ್ಯವಹಾರ ಅಥವಾ ಒಪ್ಪಂದದಲ್ಲಿನ ಸಮಸ್ಯೆ ಕಾರಣಕ್ಕೆ ಅಲ್ಲ ಎಂದು ಆರ್ ಬಿಐ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top