ದಾವಣಗೆರೆ: ಜಿಲ್ಲೆಯ ಮಾಯಕೊಂಡ ಗ್ರಾಮದಲ್ಲಿ ನಿನ್ನೆ (ಮಾ.19) ವರ್ಷದ ಮೊದಲ ಮಳೆಯಾಗಿದೆ. ಈ ಮೂಲಕ ಬೇಸಿಗೆ ಬಿಸಿಲಿನ ತಾಪಮಾನದಿಂದ ಬೇಸತ್ತಿದ್ದ ಜನರಿಗೆ ಮೊದಲ ಮಳೆ ತಂಪೆರೆದಿದೆ.
ಮಾ.22ರಿಂದ ಎರಡ್ಮೂರು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
ನಿನ್ನೆ ಏಕಾಏಕಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನ ವೇಳೆಗೆ ಅರ್ಧ ಗಂಟೆಯಷ್ಟು ಮಳೆಯಾಗಿದೆ. ಇನ್ನೂ ಮಾಯಕೊಂಡ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚದುರಿದ ಮಳೆಯಾಗಿದೆ.
ದಾವಣಗೆರೆ: ತುಮ್ಕೋಸ್ ನೂತನ ಅಧ್ಯಕ್ಷರಾಗಿ ಎಚ್.ಎಸ್.ಶಿವಕುಮಾರ್ ಅವಿರೋಧ ಆಯ್ಕೆ
ಮಾರ್ಚ್22 ರಿಂದ 23ರ ವರೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಾವಣಗೆರೆ: ಮನೆಕಳ್ಳತನ ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಆರೋಪಿ ಬಂಧನ; 5.50 ಲಕ್ಷ ಮೌಲ್ಯದ ಸ್ವತ್ತು ವಶ
ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ವರ್ಷದ ಮೊದಲ ಮಳೆಯಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಅದರಲ್ಲೂ ಅಡಿಕೆ ಬೆಳೆ ತೀವ್ರ ತಾಪಮಾನದಿಂದ ಕುಗ್ಗಿ ಹೋಗಿದೆ. ಈ ಮಳೆಯಿಂದ ಸ್ವಲ್ಪ ವಾತಾವರಣ ತಂಪಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ದಾವಣಗೆರೆ: ಅಡಿಕೆ ಧಾರಣೆ; ಸತತ ಎರಡು ದಿನದಿಂದ ಕುಸಿತ- ಮಾ.19ರ ದರ ಎಷ್ಟಿದೆ..?



