ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನ ಶುರುವಾದ ಮಳೆ ತಡ ರಾತ್ರಿ ವರೆಗೂ ಭಾರೀ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ, ಎರಡ ದಿನದಿಂದ ಸತತ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ನಿರಂತರ ಮಳೆಯಾಗಿದೆ. ಸರಾಸರಿ 14.2 ಮಿ.ಮೀ ಮಳೆಯಾಗಿದ್ದು, ಕೊಯ್ಲಿಗೆ ಬಂದ ಮಕ್ಕೆಜೋಳ ಬೆಳೆಗೆ ಅಪಾರ ಹಾನಿ ಉಂಟಾಗಿದೆ.
ಚನ್ನಗಿರಿ 9.3 ಮಿ.ಮೀ, ದಾವಣಗೆರೆ 19.9 ಮಿ.ಮೀ, ಹರಿಹರ 11.2 ಮಿ.ಮೀ, ಹೊನ್ನಾಳಿ 7.1 ಹಾಗೂ ಜಗಳೂರು ತಾಲ್ಲೂಕಿನಲ್ಲಿ 23.09 ಮಿ.ಮೀ ಮಳೆಯಾಗಿದೆ. ಈ ಬಾರಿ ವಾಡಿಕೆಗಿಂತ ಶೇ 168ರಷ್ಟು ಹೆಚ್ಚು ಮಳೆಯಾಗಿದೆ. ಈ ಹಿಂಗಾರು ಮಳೆಯಿಂದ ಹಿಂಗಾರು ಬಿತ್ತನೆಗೆ ಅನುಕೂಲವಾಗಿದೆ. ಆದರೆ, ಕೊಯ್ಲಿಗೆ ಬಂದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.



