ದಾವಣಗೆರೆ: ಜಿಲ್ಲೆಯಲ್ಲಿ ಸಂಜೆಯಿಂದ ಭಾರಿ ಮಳೆಯಾಗುತ್ತಿದ್ದು, ತಗ್ಗ ಪ್ರದೇಶಗಳು ಜಲಾವೃತವಾಗಿದೆ. ಜಿಲ್ಲೆಯ ಹರಿಹರ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಸಂಜೆ ಒಂದೂವರೆ ತಾಸು ಸುರಿದ ಮಳೆ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ.
ಕೊಂಡಜ್ಜಿ ಗುಡ್ಡ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಬುಳ್ಳಾಪುರದ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಭಾರಿ ಮಳೆಗೆ ಮನೆಯಲ್ಲಿದ್ದ ವಸ್ತುಗಳು ಹಾನಿಗೀಡಾಗಿವೆ. ನಾಗರಿಕರು ಪರದಾಡುವಂತಾಗಿದೆ. ಇನ್ನೂ ಕೊಂಡಜ್ಜಿ ಕೆರೆ ತುಂಬಿ ಕೋಡಿ ಬಿದ್ದು, ಭಾರೀ ಪ್ರಮಾಣದಲ್ಲಿ ನೀರು ಹೊರ ಬರುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ಬುಳ್ಳಾಪುರ, ಕೆಂಚನಹಳ್ಳಿ ಗ್ರಾಮದ ಜನರು ಅಪಾಯದಲ್ಲಿ ಕಾಲ ಕಳೆಯುವಂತಾಗಿದೆ.



