ದಾವಣಗೆರೆ: ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸುತ್ತಮುತ್ತ ತಡ ರಾತ್ರಿ ಭಾರೀ ಮಳೆಯಾಗಿದೆ. ಕಳೆದ15 ದಿನದಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆ ಇದೀಗ ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ.
ಮಲೇಬೆನ್ನೂರಲ್ಲಿ ನಿನ್ನೆ ತಡ ರಾತ್ರಿ ಶುರುವಾದ ಮಳೆ ಬೆಳಗ್ಗೆ ವರೆಗೂ ಎಡೆಬಿಡದೆ ಸುರಿದಿದೆ. ಇದರಿಂದ ರಾತ್ರಿ ಪೂರ್ತಿ ವಿದ್ಯುತ್ ವ್ಯತ್ಯಯವಾಗಿದೆ. ಈ ಮಳೆಯಿಂದ ಭತ್ತ ನಾಟಿ ಪ್ರಾರಂಭಿಸಿದ ರೈತರಿಗೆ ಹಾಗೂ ಈಗಾಗಲೇ ಮೆಕ್ಕೆಜೋಳ ಬಿತ್ತಿದ ರೈತರಿಗೆ ಅನುಕೂಲವಾಗಿದೆ.