ದಾವಣಗೆರೆ; ನಗರ ಹಾಗೂ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಮತ್ತು ತಡ ರಾತ್ರಿ ಬಿರುಗಾಳಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ರಾತ್ರಿ 10 ಗಂಟೆಯಿಂದ ಶುರುವಾದ ಮಳೆ, ಗುಡುಗು, ಸಿಡಿಲು, ಬಿರು ಗಾಳಿಗೆ ಜನ ತತ್ತರಿಸಿ ಹೋಗಿದ್ದರು. ನಗರ ಪ್ರದೇಶ ಸೇರಿ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದೆ. ಕೆಲ ಕಡೆ ವಿದ್ಯುತ್ ಕಂಬ, ಮರಗಳು ಮುರಿದು ಬಿದ್ದಿದ್ದು,ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಟ್ ಆಗಿದೆ.
ನಗರದದಲ್ಲಿ ತಗ್ಗು ಪ್ರದೇಶದಲ್ಲಿ ನೀರು ತುಂಬಿದ್ದರಿಂದ ಜನರು ಪರದಾಟ ನಡೆಸಿದರು. ಇಡೀ ದಿನ ಜನರು ಕತ್ತಲಲ್ಲಿ ರಾತ್ರಿ ಕಳೆಯುವಂತಾಗಿತ್ತು. ಇನ್ನು ಗ್ರಾಮೀಣ ಭಾಗದಲ್ಲಿ ಮಳೆ, ಗಾಳಿಯಿಂದ ಅಡಿಕೆ, ಬಾಳೆ, ಭತ್ತದ ಬೆಳೆಗೆ ಅಪಾರ ಪ್ರಮಾಣ ಹಾನಿ ಸಂಭವಿಸಿದೆ.
ಚನ್ನಗಿರಿ ತಾಲೂಕಿನಲ್ಲಿ ತಿಪ್ಪಗೊಂಡನಹಳ್ಳಿ ಗ್ರಾಮದಹೊರವಲಯದಲ್ಲಿ ತೋಟವೊಂದರಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಹೊಡೆದು ಸುಟ್ಟು ಕರಕಲಾಗಿದೆ. ಜಗಳೂರು, ದಾವಣಗೆರೆ, ಹುಹರ, ಚನ್ನಗಿರಿ, ನ್ಯಾಮತಿ, ಹೊನ್ನಾಳಿ ತಾಲೂಕಿನಲ್ಲೂ ಮಳೆಯಾಗಿದೆ. ಜಿಲ್ಲೆಯಾದ್ಯಂತ ಭಾರೀ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ಸಂಪರ್ಕ ಇಲ್ಲದೇ ಗ್ರಾಮೀಣ ಭಾಗಗಳು, ಮನೆಗಳು ಕಗ್ಗತ್ತಲಲಿನಲ್ಲಿ ರಾತ್ರಿ ಕಳೆಯಬೇಕಾಯಿತು.
ಬಿತ್ತನೆಗಾಗಿ ಮಳೆಯನ್ನೇ ಎದುರು ನೋಡುತ್ತಿದ್ದ ರೈತರು ಮಂಗಳವಾರದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗುವ ಸಾಧ್ಯತೆ ಇದೆ. ಈ ಬಳೆ ರೈತಾಪಿ ಜನರ ಮೊಗದಲ್ಲಿ ಹರ್ಷ ತಂದಿದೆ.ಈ ಮಳೆ ಇನ್ನೂ ಮೂರ್ನಾಲ್ಕು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.