ದಾವಣಗೆರೆ: ಅತಿವೃಷ್ಟಿಯಿಂದಾಗಿ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿ ಆರಂಭಿಕ ಪರಿಹಾರವನ್ನು ತಕ್ಷಣ ಒದಗಿಸಿ. ಮನೆಹಾನಿಯಾಗಿರುವ ವ್ಯಾಪ್ತಿಯ ಇಂಜನಿಯರು, ತಹಶೀಲ್ದಾರರು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮನೆ ಸಂಪೂರ್ಣ ಅಥವ ಭಾಗಶಃ ಹಾನಿಗೊಳಗಾದ ಸಂತ್ರಸ್ತರ ಬಳಿ ತೆರಳಿ ಮನೆಹಾನಿ ಸರ್ವೆ ನಡೆಸಿ ವರದಿ ನೀಡಬೇಕು. ಮತ್ತು ಆ ಸರ್ವೆ ವರದಿಗೆ ಗ್ರಾಮಸ್ಥರು ಸಹಿ ಹಾಕಬೇಕು ಮತ್ತು ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯ ಬಗೆಗೆ ಜಂಟಿ ಸರ್ವೆ ಮಾಡಿ ವರದಿ ನೀಡಬೇಕೆಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‍ನ ‘ಪ್ರವಾಹ ಸನ್ನದ್ದತೆ’ ಸಭೆಯಲ್ಲಿ ಮಾತನಾಡಿದ ಅವರು, ಮಹಾಮಳೆಯಿಂದ ಮನೆ ಕಳÀದುಕೊಂಡಿರುವವರಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿರುವವರಿಗೆ ಆರಂಭಿಕ ಪರಿಹಾರವಾಗಿ ಎನ್.ಡಿ.ಆರ್.ಎಫ್ ನಿಯಮಾಳಿಯಂತೆ 3800 ರೂ ಪರಿಹಾರ ವಿತರಿಸಬೇಕು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿ, ಈ ತಿಂಗಳ 15 ನೇ ತಾರೀಖಿನವರಗೆ 16 ಮಿಲಿ ಮೀ ಮಳೆಯಾಗಬೇಕಿತ್ತು ಆದರೆ 157 ಮಿಲಿ ಮೀ ಮಳೆ ಬಿದ್ದಿದೆ. ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಜಿಲ್ಲೆಯಲ್ಲಿ ಭತ್ತದ ಬೆಳೆ ಚಾಪೆ ಹಾಸಿದಂತೆ ಬಿದ್ದಿರುವ ಕಾರಣ ಹಾನಿ ಹೆಚ್ಚಾಗಿ ಉಂಟಾಗಿದೆ. ಚನ್ನಗಿರಿ ತಾಲ್ಲೂಕಿನ ಜಯಂತಿನಗರ, ಕೋಟೆಹಾಳ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಪರಿಣಾಮ 87 ಕ್ಕೂ ಹೆಚ್ಚಿನ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಅವರಿಗೆ ಸಮುದಾಯ ಭವನ ಹಾಗೂ ಶಾಲೆಗಳಲ್ಲಿ ಆಶ್ರಯ ಕಲ್ಪಿಸಿ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಹರಿಹರ ತಾಲೂಕಿನ ಭಾನುವಳ್ಳಿ ಮತ್ತು ಬೆಳ್ಳುಡಿ ಹಾಗೂ ಹರಿಹರ ನಗರದ ಗಂಗಾನಗರಗಳಲ್ಲಿಯೂ ಕೂಡ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿತ್ತು, ಅಲ್ಲಿಯೂ ಕೂಡ 62 ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಆರೋಗ್ಯ ತಪಾಸಣೆ ನಡೆಸಿ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಚನ್ನಗಿರಿ ಭಾಗದಲ್ಲಿ ಪ್ರವಾಸ ಕೈಗೊಂಡು ಹಾನಿ ಪ್ರಮಾಣವನ್ನ ಇಂದು ವೀಕ್ಷಿಸುತ್ತಿದ್ದಾರೆ, ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಐ ಸ್ಯಾಟ್ ಸರ್ವೇ ಪ್ರಕಾರ 4449 ಹೆಕ್ಟೇರ್ ನಷ್ಟು ಭತ್ತದ ಬೆಳೆ ಹಾಗೂ ಸುಮಾರು 77 ಹೆಕ್ಟೇರ್ ನಷ್ಟು ಅಡಿಕೆ, ಬಾಳೆ, ತೆಂಗು, ಹಾಗೂ ಮಾವು ಬೆಳೆಗೆ ಹಾನಿಯಾಗಿದೆ ಒಟ್ಟು 4526 ಹೆಕ್ಟೇರ್ ನಷ್ಟು ವಿವಿಧ ಬೆಳೆ ಹಾನಿಯಾಗಿದೆ ಹಾಗೂ ಜಿಲ್ಲೆಯಲ್ಲಿ 40 ಮನೆಗಳು ಸಂಪೂರ್ಣ ಹಾನಿ ಹಾಗೂ 265 ಮನೆಗಳು ಭಾಗಶಃ ಸೇರಿ ಒಟ್ಟು 305 ಮನೆಗಳಿಗೆ ಹಾನಿಯಾಗಿದೆ. 68 ಶಾಲೆಗಳು, 54 ಅಂಗನವಾಡಿಗಳಿಗೆ ಹಾನಿಯಾಗಿದ್ದು, 265 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಚನ್ನಪ್ಪ ಎ, ಅಪರ ಜಿಲ್ಲಾಧಿಕಾರಿ ಪುಜಾರ್ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಹುಲ್ಲುಮನಿ ತಿಮ್ಮಣ್ಣ, ಡಿಯುಡಿಸಿ ಅಧಿಕಾರಿ ನಜ್ಮಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.