ದಾವಣಗೆರೆ: ಚಲಿಸುತ್ತಿದ್ದ ರೈಲಿನಿಂದ (train) ಬೀಳುತ್ತಿದ್ದ ವಿಕಲಚೇತನನ್ನು ಕರ್ತವ್ಯನಿರತ ಆರ್‌ಪಿಎಫ್ ಮುಖ್ಯಪೇದೆ ರಕ್ಷಣೆ ಮಾಡಿದ ಘಟನೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ದಾವಣಗೆರೆ: ದತ್ತು ಸ್ವೀಕಾರ ಕೇಂದ್ರದ 2ನೇ ಘಟಕಕ್ಕೆ ಚಾಲನೆ; ದತ್ತು ಸ್ವೀಕಾರಕ್ಕೆ ಈ ರೀತಿ ಮಾಡಿ..
ವಿಜಯಪುರ ಜಿಲ್ಲೆ ಹಿಟ್ಟಿನಹಳ್ಳಿ ಗ್ರಾಮದ ಎಚ್.ಎನ್.ಪ್ರಶಾಂತ (25) ಪ್ರಾಣಾಪಾಯದಿಂದ ಪಾರಾದ ವಿಕಲಚೇತನ. ಬೆಂಗಳೂರಿನ ಆಸ್ಪತ್ರೆಯಿಂದ ಹೊಸಪೇಟೆಯಿಂದ ಯಶವಂತಪುರದ ವಿಶೇಷ (ರೈಲು ಸಂಖ್ಯೆ-06546) ರೈಲಿನಲ್ಲಿ ಎಚ್.ಎನ್.ಪ್ರಶಾಂತ ಪ್ರಯಾಣ ಬೆಳೆಸಿದ್ದರು. ಭಾನುವಾರ ರಾತ್ರಿ 11.32ಕ್ಕೆ ದಾವಣಗೆರೆ ನಿಲ್ದಾಣಕ್ಕೆ ರೈಲು ಆಗಮಿಸಿದೆ. ಈ ವೇಳೆ ಬಾಗಿಲು ಬಳಿಯಿದ್ದ ಪ್ರಶಾಂತ್, ವಾಕಿಂಗ್ ಸ್ಟ್ಯಾಂಡ್ ಹಿಡಿದು, ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಮುಂದಾಗಿದ್ದಾರೆ.
ಈ ವೇಳೆ ಆಯತಪ್ಪಿದ್ದು, ಅಲ್ಲೇ ಕರ್ತವ್ಯನಿರತ ಆರ್‌ಪಿಎಫ್ ಮುಖ್ಯ ಪೇದೆ ಬಿ.ಎಸ್.ಸತೀಶ ರೈಲಿನಿಂದ ವಿಕಲಚೇತನ ಬೀಳುವುದನ್ನು ಕಂಡು ನೆರವಿಗೆ ಧಾವಿಸಿದರು. ರೈಲ್ವೆ ನಿಲ್ದಾಣದ 2ನೇ ಪ್ಲಾಟ್ ಫಾರಂ ಬದಿಗೆ ವಿಕಲಚೇತನ ಪ್ರಶಾಂತ್‌ನನ್ನು ಎಳೆದುಕೊಂಡು, ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ತಕ್ಷಣವೇ ನಿಲ್ದಾಣದಲ್ಲಿದ್ದ ಜನರು ಸಹ ನೆರವಿಗೆ ಧಾವಿಸಿದರು.
ಆರ್‌ಪಿಎಫ್ ಮುಖ್ಯಪೇದೆ ಬಿ.ಎಸ್.ಸತೀಶ ಸಮಯಪ್ರಜ್ಞೆಗೆ ರೈಲ್ವೆ ವಿಚಕ್ಷಣಾ ದಳದ ನಿರೀಕ್ಷಕ ಬಿ.ಕೆ.ಪ್ರಕಾಶ, ಉಪ ನಿರೀಕ್ಷಕ ಎ.ಕೊಂಡರೆಡ್ಡಿ ಅಭಿನಂದಿಸಿದರು.



