ದಾವಣಗೆರೆ: ರೈಲ್ವೆ ಹಳಿ ದಾಟುವಾಗ ಶಿಕ್ಷಕರೊಬ್ಬರು ಎಡವಿ ಹಳಿ ಮೇಲೆ ಬಿದ್ದಿದ್ದಾರೆ. ದಿಢೀರ್ ಗೂಡ್ಸ್ ರೈಲು ಬಂದಿದ್ದು, ಆಗ ಹಳಿ ಮಧ್ಯೆಯೇ ಮಲಗಿ ಉಳಿಸಿಕೊಂಡು ಸಾಹಸ ಮೆರೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ರೈಲ್ವೆ ನಿಲ್ದಾಣದಲ್ಲಿ ಚಿತ್ರದುರ್ಗ ಜಿಲ್ಲೆಯ ಬಿ.ದುರ್ಗ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಬೆಳಿಗ್ಗೆ 8.30ರ ವೇಳೆ ಬೆಂಗಳೂರು ಇಂಟರ್ ಸಿಟಿ ರೈಲಿಗೆ ಹೊರಡಲು ಸಿದ್ಧರಾಗಿದ್ದರು. ಆಗ, ಒಂದನೇ ಫ್ಲಾಟ್ ಫಾರಂನಿಂದ 2ನೇ ಫ್ಲಾಟ್ ಫಾರಂಗೆ ಹೋಗಲು ಹಳಿ ದಾಟುವಾಗ ಚಪ್ಪಲಿ ಸಿಲುಕಿಕೊಂಡು ಎಡವಿ ಹಳಿಯ ಮಧ್ಯೆ ಬಿದ್ದಿದ್ದಾರೆ. ದಿಢೀರ್ ಗೂಡ್ಸ್ ರೈಲು ಅದೇ ಹಳಿಯ ಮೇಲೆ ಬಂದಿದೆ. ಶಿವಕುಮಾರ್ ಹಳಿಯ ಮಧ್ಯೆಯೇ ಮಲಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ದಾವಣಗೆರೆ; ರೈಲ್ವೆ ಹಳಿ ದಾಟುವಾಗ ಎಡವಿ ಬಿದ್ದರೂ, ಹಳಿಯ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಶಿಕ್ಷಕ pic.twitter.com/JPy7KPFacw
— DVG Suddi (@dvg_suddi) September 14, 2023
ಅಲ್ಲೇ ಇದ್ದ ರೈಲ್ವೆ ಸಿಬ್ಬಂದಿ ಗೂಡ್ಸ್ ರೈಲು ನಿಲ್ಲಿಸಿದ್ದು, ಆರ್ ಪಿಎಫ್ ಸಿಬ್ಬಂದಿ ಅವರನ್ನು ಮೇಲೆ ಎತ್ತಿ ರಕ್ಷಿಸಿದ್ದಾರೆ .ಶಿಕ್ಷಕ ಶಿವಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ದಾವಣಗೆರೆ: ಅಡಿಕೆ ಬೆಲೆಯಲ್ಲಿ ಸ್ಥಿರತೆ; ಇಂದಿನ ಅಡಿಕೆ ದರ 50, 379 ರೂಪಾಯಿ..!



