ದಾವಣಗೆರೆ: ಚಲಿಸುವ ರೈಲಿಗೆ ತಲೆಕೊಟ್ಟು ತಾಯಿ-ಮಗಳು ಆತ್ಮಹ*ತ್ಯೆದಾವಣಗೆರೆ: ಚಲಿಸುವ ರೈಲಿಗೆ ತಲೆ ಕೊಟ್ಟು ತಾಯಿ ಮತ್ತು ಮಗಳು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಹರಿಹರ ಪಟ್ಟಣದ ತುಂಗಭದ್ರಾ ನದಿ ಸೇತುವೆ ಬಳಿ ನಡೆದಿದೆ.
ಹರಿಹರ ತಾಲೂಕಿನ ಗಂಗನರಸಿ ಗ್ರಾಮದ ವಾಸಿಗಳಾದ ತಾಯಿ ಸುವಣಮ್ಮ (65), ಮಗಳು ಗೌರಮ್ಮ (45) ಆತ್ಮಹ*ತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಆತ್ಮಹ*ತ್ಯೆಗೆ ಸ್ಪಷ್ಟವಾದ ಕಾರಣ ತಿಳಿದಿಲ್ಲ. ರೈಲಿನ ರಭಸಕ್ಕೆ ಮೃತರ ರುಂಡ-ಮುಂಡ ಪ್ರತ್ಯೇಕವಾಗಿವೆ. ದಾವಣಗೆರೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.



