ದಾವಣಗೆರೆ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 40 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸುವಂತೆ ರಾಜ್ಯ ಪೌರ ಕಾರ್ಮಿಕ ಸಂಘ ಒತ್ತಾಯಿಸಿದೆ. ಕಾಯಂಗೊಳಿಸದಿದ್ದರೆ ಬೀದರ್ ನಿಂದ ಚಾಮರಾಜನಗರ ವರೆಗೆ ಕೆಲಸ ಸ್ಥಗಿತ ಗೊಳಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಪೌರ ಕಾರ್ಮಿಕ ರ ಸಂಘದ ಅಧ್ಯಕ್ಷ ಮೈಸೂರ್ ನಾರಾಯಣ ಹೇಳಿದರು.
ದಾವಣಗೆರೆ ನಗರದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ರಾಜ್ಯ ಪೌರಕಾರ್ಮಿಕರ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು, ಈ ಹಿಂದೆ 2017 ರಲ್ಲಿ ರಾಜ್ಯದ ಪೌರ ಕಾರ್ಮಿಕರು, ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಿದ್ದರು. ಅದೇ ಮಾದರಿಯಲ್ಲಿ ಹೋರಾಟ ಮಾಡಲಾಗುವುದು ೆಂದು ಎಚ್ಚರಿಸಿದರು.
ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಗುತ್ತಿಗೆ ನೌಕರಾಗಿದ್ದಾರೆ. ಇವರಿಗೆ ಆರೋಗ್ಯ ಭದ್ರತೆ ಸೂಕ್ತ ಸಂಬಳ ಸಿಗುತ್ತಿಲ್ಲ. ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಲಿದ್ದು, ಅಷ್ಟರೊಳಗೆ ಬೇಡಿಕೆ ಈಡೇರಿಸಬೇಕು. ಸರ್ಕಾರ ಪೌರ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಮಾಡಿದರೇ ಹೋರಾಟ ಅನಿವಾರ್ಯ ಎಂದರು.



