ಬೆಂಗಳೂರು : ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದು ಕುರಿತು ಅತಿ ಶೀಘ್ರವೇ ಶುಲ್ಕ ನಿಗದಿ ಆದೇಶ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳಲ್ಲಿ ಶುಲ್ಕ ವಿಚಾರದ ಕುರಿತಂತೆ ಶೀಘ್ರವೇ ಆದೇಶ ಹೊರಡುಸುತ್ತೇವೆ. ಪೋಷಕರು ಪ್ರತಿಭಟನೆ ಮಾಡುವುದು ಬೇಡ. ಪ್ರತಿಭಟನೆ ಮಾಡಿದರೆ ಪರಿಹಾರ ಸಿಗಲ್ಲ. ಪರಿಹಾರ ಕೊಡುವ ಹಂತದಲ್ಲಿದ್ದೇವೆ. ದಿಢೀರ್ ಅಂತ ನಾವು ಶುಲ್ಕದ ಬಗ್ಗೆ ನಿರ್ಧಾರ ಮಾಡಲು ಆಗಲ್ಲ. ಸರ್ಕಾರ ಪೋಷಕರ ಪರವಾಗಿದ್ದು, ಅವರ ಪರವಾಘಿ ಕೆಲಸ ಮಾಡುತ್ತೇನೆ. ಶೀಘ್ರವೇ ಶುಲ್ಕ ನಿಗದಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.



