ದಾವಣಗೆರೆ: ಬೋರ್ ವೆಲ್ ಗೆ ಮೋಟಾರ್ ಇಳಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಹೈಡ್ರಾಲಿಕ್‌ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲಿಯೇ ಯುವಕ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಕಾಕನೂರಿನ ಜಮೀನೊಂದರಲ್ಲಿ ನಡೆದಿದೆ.
ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಅಪಘಾತ; ದಾವಣಗೆರೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಚನ್ನಗಿರಿ ನಿವಾಸಿ ಹನುಮಂತಪ್ಪ (32) ಮೃತ ಯುವಕನಾಗಿದ್ದಾನೆ. ಕಾಕನೂರಿನ ನಾಗರಾಜಪ್ಪ ಎಂಬುವವರ ಇತ್ತೀಚೆಗೆ ಕೊಳಬೆ ಬಾವಿ ಕೊರೆಯಿಸಿದ್ದರು. ಅದಕ್ಕೆ ಮೋಟಾರ್ ಬಿಡಲು ಜಕ್ಕಲಿ ಗ್ರಾಮದ ಹಾಲೇಶಪ್ಪ ಅವರೊಂದಿಗೆ ಸಹಾಯಕರಾಗಿ ಶರತ್, ಹನುಮಂತಪ್ಪ ತೆರಳಿದ್ದರು.
ದಾವಣಗೆರೆ ಅಡಿಕೆ ಧಾರಣೆ: ಮತ್ತೆ ಏರಿಕೆ ಕಂಡ ದರ; ಮಾ.14ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಏಕಾಏಕಿ ಜೋರು ಗಾಳಿ ಬೀಸಿದ ಪರಿಣಾಮ ವಿದ್ಯುತ್ ತಂತಿ ಟ್ರ್ಯಾಕ್ಟರ್‌ನ ಹೈಡ್ರಾಲಿಕ್‌ಗೆ ತಗುಲಿ ವಿದ್ಯುತ್ ಶಾಕ್ ಹೊಡೆದಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಹಾಲೇಶಪ್ಪಗೆ ಮೊದಲು ವಿದ್ಯುತ್ ಶಾಕ್ ಹೊಡೆದಿದೆ. ಕೂಡಲೇ ಹನುಮಂತಪ್ಪ, ಶರತ್ ಹಾಗೂ ಜಮೀನು ಮಾಲೀಕ ನಾಗರಾಜಪ್ಪ ಅವರು ಹಾಲೇಶಪ್ಪನನ್ನು ಎಳೆದುಕೊಂಡಿದ್ದಾರೆ. ಆದರೆ, ಹನುಂತಪ್ಪಗೆ ವಿದ್ಯುತ್ ಹರಿದ ಪರಿಣಾಮ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಈ ಬಗ್ಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ಪ್ರಥಮ ದರ್ಜೆ ಸಹಾಯಕ



