ದಾವಣಗೆರೆ: ಮಾ. 31 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6.30 ರವರೆಗೆ ದಾವಣಗೆರೆ ತಾಲ್ಲೂಕು ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ನಿರ್ವಹಿಸುವ ಸಲುವಾಗಿ ಎಸ್‍ಆರ್‍ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-21 ತರಳಬಾಳು 11ಕೆವಿ ವಿದ್ಯುತ್ ಮಾರ್ಗದಿಂದ ವಿದ್ಯತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಶಿರಮಗೊಂಡನಹಳ್ಳಿ, ನಾಗನೂರು, ನಾಗಮ್ಮಕೇಶವಮೂರ್ತಿ ನಗರ, ಬಿಸಲೇರಿ, 6ನೇ ಮತ್ತು 7ನೇ ಮೈಲಿಕಲ್ಲು, ಜವಳಘಟ್ಟ ಗ್ರಾಮಗಳಲ್ಲಿ ಹಾಗೂ ಎಫ್-9 ಶಾಮನೂರು 11ಕೆವಿ ವಿದ್ಯುತ್ ಮಾರ್ಗದಿಂದ ವಿದ್ಯತ್ ಸರಬರಾಜಾಗುವ ಜೆ.ಹೆಚ್.ಪಟೇಲ್ ನಗರ, ಸಂಭ್ರಮ ಹೋಟೆಲ್ ಸುತ್ತಮುತ್ತ, ಹೊಸ/ಹಳೇ ಕುಂದವಾಡ, ಕೆ.ಹೆಚ್.ಬಿ. ಕಾಲೋನಿ ಗಳಲ್ಲಿ ಮಾ.31 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



