ದಾವಣಗೆರೆ: ನಗರದ ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್-18 ದುರ್ಗಾಂಬಿಕಾ & ಎಫ್-15 ಕಮರ್ಷಿಯಲ್ ಫೀಡರ್‍ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ನಿರ್ವಹಿಸುವುದರಿಂದ ಮೇ 07 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-18 ದುರ್ಗಾಂಭಿಕಾ ಫೀಡರ್ ವ್ಯಾಪ್ತಿಯ ಎಂ.ಬಿ ಕೇರಿ, ಹೊಂಡದ ಸರ್ಕಲ್, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚಲುವಾದಿ ಕೇರಿ, ಇ.ಡಬ್ಲ್ಯೂಎಸ್ ಕಾಲೋನಿ, ಹಳೆಪೇಟೆ, ಬಾರ್‍ಲೈನ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಫ್-15- ಕಮರ್ಷಿಯಲ್ ಫೀಡರ್ ವ್ಯಾಪ್ತಿಯ ಹಗೆದಿಬ್ಬ ಸರ್ಕಲ್, ಗಾಂಧಿನಗರ, ಅಂಬೇಡ್ಕರ್ ಸರ್ಕಲ್, ಮಹಾರಾಜಪೇಟೆ, ಬಸವರಾಜ ಪೇಟೆ, ಚೌಕಿಪೇಟೆ, ವಿಜಯಲಕ್ಷ್ಮೀ ರಸ್ತೆ, ದೊಡ್ಡಪೇಟೆ, ಕಾಳಿಕಾದೇವಿ ರಸ್ತೆ, ಎಸ್.ಕೆ.ಪಿ ರಸ್ತೆ, ಹಳೆಪೇಟೆಯ ವೀರಭದ್ರೇಶ್ವರ ದೇವಸ್ಥಾನ, ಕೆ.ಆರ್ ಮಾರ್ಕೆಟ್, ಹೆರಿಗೆ ಆಸ್ಪತ್ರೆ, ಚಾಮರಾಜ ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



