ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-1ರ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಇಂಡಸ್ಟ್ರಿಯಲ್ ಫೀಡರ್‍ನಲ್ಲಿ ಕೆ.ಯು.ಐ.ಡಿ.ಎಫ್.ಸಿ. 24*7 ಜಲಸಿರಿ ಯೋಜನೆಯಡಿ ನಿರಂತರ ಶುದ್ಧ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಫೆ.25) ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ.
ಇಂಡಸ್ಟ್ರಿಯಲ್ ಏರಿಯಾ ಲೋಕಿಕೆರೆ ರಸ್ತೆ, ಲಲಿತಾ ಇಂಟರ್‍ನ್ಯಾಷನಲ್ ಸ್ಕೂಲ್, ಸುಬ್ರಹ್ಮಣ್ಯ ನಗರ, ಎಸ್.ಎ. ರವೀಂದ್ರನಾಥ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೊನ್ನೂರು, ಎಫ್-5 ಮಲ್ಲಶೆಟ್ಟಿಹಳ್ಳಿ ಮತ್ತು ಎಫ್-8 ಆನಗೊಡು ಮಾರ್ಗಗಳಲ್ಲಿ 11 ಕೆವಿ ಲಿಂಕ್ ಲೌನ್ ವರ್ಕ್ ಮತ್ತು ಫೀಡರ್ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 05 ರವರೆಗೆ ಹೊನ್ನೂರು, ಹೊನ್ನೂರು ಗೊಲ್ಲರಹಟ್ಟಿ, ಎಚ್.ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ, ಚಟ್ಟೋಬನಹಳ್ಳಿ ಮತ್ತು ಕರಿಲಕ್ಕೇನಹಳ್ಳಿ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



