ದಾವಣಗೆರೆ: ಎಮ್.ಸಿ.ಸಿ.ಬಿ ಮತ್ತು ಜಯನಗರ ಫೀಡರ್‍ಗಳಲ್ಲಿ 24*7 ಜಲ ಸಿರಿ ವತಿಯಿಂದ ಕುಡಿಯುವ ನೀರು ಯೋಜನೆ ಕಾಮಗಾರಿ ಮತ್ತು ಅಶೋಕ ಗ್ಯಾಸ್ (ಯುಇಪಿಎಲ್) ವತಿಯಿಂದ ಪೈಪ್‍ಲೈನ್ ನಿರ್ಮಾಣದ ಕಾಮಗಾರಿಗಾಗಿ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ಇಂದು ಫೆ.17 ರಂದು ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಸ್. ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಎಂಸಿಸಿ ಬಿ-ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಶಾಮನೂರ ರೋಡ್, ಗ್ರೀನ್ ಪಾರ್ಕ, ಬಾಪೂಜಿ ಸಮುದಾಯ ಭವನ, ಬಾಟ್ಲಿ ಬಿಲ್ಡಿಂಗ್, ಬಿಐಇಟಿ ಕಾಲೇಜ್, ಗ್ಲಾಸ್‍ಹೌಸ್, ಅಂಗವಿಕಲ ಸ್ಕೂಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಜಯನಗರ ಫೀಡರ್: ನಿಟುವಳ್ಳಿ ಹಾಗೂ ನಿಟುವಳ್ಳಿ ಹೊಸಬಡಾವಣೆ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ, 60 ಅಡಿ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



