Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

bescom 22

ದಾವಣಗೆರೆ

ದಾವಣಗೆರೆ: ಇಂದು ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ:  ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್08-ವಿಜಯನಗರ ಮಾರ್ಗದ ವ್ಯಾಪ್ತಿಯಲ್ಲಿ ದಾವಣಗೆರೆ ವ್ಯಾಪ್ತಿಯಲ್ಲಿ ಸ್ಮಾರ್ಟಸಿಟಿ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಇಂದು ( ಡಿ.28)  ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಫ್08-ವಿಜಯನಗರ ಫೀಡರ್‍ನ ವ್ಯಾಪ್ತಿಯ ದೇವರಾಜ್‍ಅರಸ್ ಬಡಾವಣೆ ‘ಬಿ’ ಬ್ಲಾಕ್ ಮತ್ತು ‘ಸಿ’ ಬ್ಲಾಕ್, ಎಸ್‍ಪಿ ಆಫೀಸ್, ಆರ್‍ಟಿಓ ಆಫೀಸ್, ವಿಜಯನಗರ ಬಡಾವಣೆ, ರಾಜೀವಗಾಂಧಿ ಬಡಾವಣೆ, ಎಸ್‍ಪಿಎಸ್ ನಗರ 2ನೇ ಹಂತ, ಎಸ್‍ಎಮ್‍ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಈ ಕೆಳಕಂಡ ವಿದ್ಯುತ್ ಮಾರ್ಗಗಳಲ್ಲಿ ಸ್ಮಾರ್ಟ ಸಿಟಿ ಲಿಮಿಟೆಡ್ ಕಾಮಗಾರಿ ಅಡಿಯಲ್ಲಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ತುರ್ತುಕಾರ್ಯವನ್ನು ಹಮ್ಮಿಕೊಂಡಿರುವುದರಿಂದ  ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಸ್.ವಿ.ಟಿ ಫೀಡರ್ ಎಫ್1 ಫೀಡರ್ ವ್ಯಾಪ್ತಿಯ ಶ್ರೀನಿವಾಸ್ ನಗರ 1ನೇ ಅಡ್ಡರಸ್ತೆ ಯಿಂದ 6ನೇ ಅಡ್ಡರಸ್ತೆಯವರಿಗೆ, ಭದ್ರಾ ಕಾಲೊನಿ, ಹದಡಿರೋಡ್, ಇನ್‍ಕಂಟ್ಯಾಕ್ಸ್ ಬಿಲ್ಡಿಂಗ್, ಡಿಆರ್‍ಆರ್ ಹಾಸ್ಟಲ್, ಅನುಭವ ಮಂಟಪ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಹಾಗೂ ಡಿ.ಸಿ.ಎಂ. ಫೀಡರ್ ಶ್ರೀರಾಮ ಬಡಾವಣೆ, ಡಿ.ಸಿ.ಎಂ.ಟೌನ್‍ಶಿಪ್, ಶಕ್ತಿನಗರ, ಅಂಬಿಕಾ ನಗರ, ಕೊಟ್ಟೂರೇಶ್ವರ ಬಡಾವಣೆ, ಜಯನಗರ, ಶೇಖರಪ್ಪ ಗೋಡೌನ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top