ದಾವಣಗೆರೆ: ಎಲೆಬೇತೂರು ಶಾಖಾ ವ್ಯಾಪ್ತಿಯ 66/11 ಕೆ.ವಿ ಓಬಜ್ಜಿಹಳ್ಳಿ ವಿ.ವಿ. ಕೇಂದ್ರ ದಿಂದ ಹೊರಡುವ ಆಂಜನೇಯ, ಆರಸಾಪುರ, ಮಾಗನಹಳ್ಳಿ, ಓಬಜ್ಜಿಹಳ್ಳಿ, ವಾಟರ್ ಸಪ್ಲೇ ಮತ್ತು ಕಡ್ಲೆಬಾಳು ಮಾರ್ಗದ ಸೋಲಾರ್ ಪ್ಲಾಂಟ್ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಜೂನ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಡ್ಲೆಬಾಳು, ಹೊಸಕಡ್ಲೆಬಾಳು, ಅರಸಾಪುರ, ತಳವಾರಹಟ್ಟಿ, ಮಾಗನಹಳ್ಳಿ, ಚಿಕ್ಕಓಬಜ್ಜಿಹಳ್ಳಿ, ದೊಡ್ಡಓಬಜ್ಜಿಹಳ್ಳಿ, ಬದಿಯಾನಾಯಕನ ತಾಂಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯ
ಕುಕ್ಕವಾಡ ಮತ್ತು ಶ್ಯಾಗಲೆ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೂವಿನಮಡು ಗ್ರಾಮ, ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



