ದಾವಣಗೆರೆ: 12 ಬಸವೇಶ್ವರ ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ನ.08) ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿವಿಧ ಏರಿಯಾದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ.
ಎಫ್12 ಬಸವೇಶ್ವರ ಫೀಡರ್: ಎಸ್.ಎಸ್ ಲೇಔಟ್ ‘ಎ’ ಬ್ಲಾಕ್, ಅಥಣಿ ಕಾಲೇಜು, ಎಂ.ಬಿ.ಎ. ಕಾಲೇಜು, ಶಾರದಾಂಬ ಸರ್ಕಲ್ ನಿಂದ ಕುಂದುವಾಡ ಕೆರೆ ರಸ್ತೆ ಎಡಭಾಗ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.