Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯ ವಿವಿಧ ಕಡೆ ಇಂದು ಬೆಳಗ್ಗೆಯಿಂದ ಸಂಜೆ ವರೆಗೆ ವಿದ್ಯುತ್ ಇರಲ್ಲ..!

bescom 22

ದಾವಣಗೆರೆ

ದಾವಣಗೆರೆ: ಜಿಲ್ಲೆಯ ವಿವಿಧ ಕಡೆ ಇಂದು ಬೆಳಗ್ಗೆಯಿಂದ ಸಂಜೆ ವರೆಗೆ ವಿದ್ಯುತ್ ಇರಲ್ಲ..!

ದಾವಣಗೆರೆ: ಜಗಳೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 22 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಜಗಳೂರು ವಿ.ವಿ ಕೇಂದ್ರದ ವ್ಯಾಪ್ತಿಯ ಜಗಳೂರು ಟೌನ್ ಮತ್ತು ಎಲ್ಲಾ ಗ್ರಾಮಗಳ ಎನ್.ಜೆ.ವೈ ಮಾರ್ಗಗಳು ಹಾಗೂ ನೀರಾವರಿ ಪಂಪ್‍ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಮೆಳ್ಳೇಕಟ್ಟೆ ಫೀಡರ್ ವ್ಯಾಪ್ತಿಯ ಆಲೂರು, ಬಿ.ಜಿ.ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಕಾಡಜ್ಜಿ ಫೀಡರ್ ವ್ಯಾಪ್ತಿಯ ರೆಡ್ಡಿ ಕ್ಯಾಂಪ್, ಪುಟಗಾನಾಳು, ಶ್ರಿರಾಮ ನಗರ, ಕಾಡಜ್ಜಿ, ಬಸವಾನಾಳು, ನಾಗರಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು
ಕುಕ್ಕವಾಡ ಫೀಡರ್ ವ್ಯಾಪ್ತಿಯ ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೊನ್ನಮರಡಿ. ಹೂವಿನಮಡು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಶ್ಯಾಗಲೆ ಫೀಡರ್ ವ್ಯಾಪ್ತಿಯ ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬಿಳಿಚೋಡು ಮತ್ತು ಪಲ್ಲಾಗಟ್ಟೆ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬಿಳಿಚೋಡು ಮತ್ತು ಪಲ್ಲಾಗಟ್ಟೆ ವಿ.ವಿ ಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಎನ್.ಜೆ.ವೈ ಮಾರ್ಗಗಳು ಹಾಗೂ ನೀರಾವರಿ ಪಂಪ್‍ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 66/11 ಕೆ.ವಿ, ವಿ.ವಿ ಕೇಂದ್ರ ಕುರುಬರಹಳ್ಳಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ವಟಗನಹಳ್ಳಿ, ಕೆಂಚನಹಳ್ಳಿ ,ಕೊಂಡಜ್ಜಿ ಮಾರ್ಗಗಳಲ್ಲಿ ನಿರಂತರ ಜ್ಯೋತಿ ಬೆಳಿಗ್ಗೆಯಿಂದ ಸಂಜೆ ತನಕ ಕೊಡಲಾಗುವುದಿಲ್ಲ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top