ದಾವಣಗೆರೆ: ದಾವಣಗೆರೆ ಎಸ್.ಆರ್.ಎಸ್ ಸ್ವೀಕರಣಾ ಕೇಂದ್ರದಿಂದ ಹೊರಡುವ 66.ಕೆ.ವಿ ಕುಕ್ಕವಾಡ ಪ್ರಸರಣ ಮಾರ್ಗದಲ್ಲಿ ತುರ್ತಾಗಿ ನಿರ್ವಾಹಣ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಇಂದು (ಅ.7) ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 66/ಕೆ.ವಿ. ಕುಕ್ಕವಾಡ, ಶ್ಯಾಗಲೆ, ಸಂತೇಬೆನ್ನೂರು, ಕೆರೆಬಿಳಚಿ, ಬಸವಾಪಟ್ಟಣ ಮತ್ತು ತ್ಯಾವಣಗಿ ವಿದ್ಯುತ್ ವಿತರಣ ಕೇಂದ್ರಗಳಿಂದ ಸರಬರಾಜಾಗುವ 11 ಕೆ.ವಿ ವಿದ್ಯುತ್ ಮಾರ್ಗಗಳಲ್ಲಿ ದಾವಣಗೆರೆ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕುಕ್ಕವಾಡ 66/11 ಕೆ.ವಿ ವ್ಯಾಪ್ತಿಯ ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೂವಿನಮಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಶ್ಯಾಗಲೆ 66/11 ಕೆ.ವಿ ವ್ಯಾಪ್ತಿಯ ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳು. ಸಂತೇಬೆನ್ನೂರು 66/11 ಕೆ.ವಿ ವ್ಯಾಪ್ತಿಯ ದೊಡ್ಡ ಮಲ್ಲಾಪುರ, ಸಿದ್ದನಮಠ, ಕಾಕನೂರು, ಸಂತೇಬೆನ್ನೂರು, ಬೆಳ್ಳಿಗನೂಡು, ನಿಂಬಾಪುರ, ಅರಳಿಕಟ್ಟೆ, ತಣಿಗೆರೆ, ಚಿಕ್ಕಬೆನ್ನೂರು, ಹೀರೆಕೊಗನೂರು, ದೊಡ್ಡಬ್ಬಿಗೆರೆ, ಅಬ್ಬಿಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕೆರೆಬಿಳಚಿ 66/11 ಕೆ.ವಿ ವ್ಯಾಪ್ತಿಯ ಕೆರೆಬಿಳಚಿ, ಹೊಸೂರು, ಚನ್ನಾಪುರ, ಆಲೂರು, ಸೋಮಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಬಸವಾಪಟ್ಟಣ 66/11 ಕೆ.ವಿ ವ್ಯಾಪ್ತಿಯ ಬಸವಾಪಟ್ಟಣ, ಹರ್ಲಿಪುರ, ಹೊಸಹಳ್ಳಿ, ಮರಬನಹಳ್ಳಿ, ಚಿರದೋನಿ, ಯಲ್ಲೋದಹಳ್ಳಿ, ಪುನ್ಯಸ್ಥಳ, ಸಂಗಾಹಳ್ಳಿ, ಸಿದ್ದೇಶ್ವರ ನಗರ, ನಿಲೋಗಲ್, ಕಂಚುಗಾರನಹಳ್ಳಿ, ದಾಗಿನಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ತ್ಯಾವಣಿಗಿ 66/11 ಕೆ.ವಿ ವ್ಯಾಪ್ತಿಯ ತ್ಯಾವಣಿಗಿ, ನೆಲ್ಕುದುರೆ, ದೊಡ್ಡಗಟ್ಟೆ, ಕತ್ತಲಗೆರೆ, ಕಾರಿಗನೂರು, ಬೆಳಲಗೆರೆ, ಹರೆಹಳ್ಳಿ, ನವಿಲೆಹಾಳು, ಕಬ್ಬಳ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



