ದಾವಣಗೆರೆ: ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್11-ಎಲ್‍ಎಫ್1 ಮಾರ್ಗದ ವ್ಯಾಪಿಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ನವಂಬರ್ 24 ರಂದು ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಫ್11-ಎಲ್‍ಎಫ್1 ಫೀಡರ್ ವ್ಯಾಪ್ತಿಯ ಮಂಡಿಪೇಟೆ, ಅಶೋಕ ಟಾಕೀಸ್, ಬಿನ್ನಿ ಕಂಪನಿ ರಸ್ತೆ, ಮಹಾವೀರ, ಕೆಆರ್ ರಸ್ತೆ, , ಗಡಿಯಾರ ಕಂಬ, ಬಿಟಿ ಗಲ್ಲಿ, ಬೇಳ್ಳೂಡಿ ಗಲ್ಲಿ, ಇಸ್ಲಾಂಪೇಟೆ, ಹೆರಿಗೆ ಆಸ್ಪತ್ರೆ, ಪೋಸ್ಟ್ ಆಫೀಸ್, ರೈಲ್ವೇ ಸ್ಟೇಷನ್, ವಿಜಯಲಕ್ಷ್ಮೀ ರಸ್ತೆ ಭಾಗಶಃ, ವಸಂತಟಾಕೀಸ್ ಭಾಗಶಃ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



