ದಾವಣಗೆರೆ: ದಾವಣಗೆರೆ ವಿದ್ಯುತ್ ಉಪ ಕೇಂದ್ರದಲ್ಲಿ ಕಬ್ಬಿಣದ ಕಂಬಗಳ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನ. 18 ರಿಂದ 20ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಮೌನೇಶ್ವರ ಬಡಾವಣೆ, ನಿಟ್ಟುವಳ್ಳಿ, ಲೆನಿನ್ ನಗರ, ಸರಸ್ವತಿ ನಗರ, ಶಕ್ತಿ ನಗರ, ಡಿ.ಸಿ.ಎಂ. ಟೌನ್ ಶಿಫ್, ಕೊಟ್ಟುರೇಶ್ವರ ಬಡಾವಣೆ, ಕೆ.ಎಸ್.ಆರ್.ಟಿ.ಸಿ., ಬಗತ್ ಸಿಂಗ್ ನಗರ, ಈರುಳ್ಳಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಕೆ.ಟಿ.ಜೆ. ನಗರ, ಕೆ.ಬಿ. ಬಡಾವಣೆ, ಪಿ.ಜೆ. ಬಡಾವಣೆ, ಸಿ.ಜಿ. ಆಸ್ಪತ್ರೆ ರಸ್ತೆ, ಮಂಡಿಪೇಟೆ, ಅಶೋಕ ಟಾಕೀಸ್, ಬಿನ್ನಿ ಕಂಪನಿ ರಸ್ತೆ, ಮಹಾವೀರ, ಕೆಆರ್ ರಸ್ತೆ, , ಗಡಿಯಾರ ಕಂಬ, ಬಿಟಿ ಗಲ್ಲಿ, ಬೇಳ್ಳೂಡಿ ಗಲ್ಲಿ, ಇಸ್ಲಾಂಪೇಟೆ, ಹೆರಿಗೆ ಆಸ್ಪತ್ರೆ, ಪೆÇೀಸ್ಟ್ ಆಫೀಸ್, ರೈಲ್ವೇ ಸ್ಟೇಷನ್, ವಿಜಯಲಕ್ಷ್ಮೀ ರಸ್ತೆ ಸ್ವಲ್ಪಭಾಗ, ವಸಂತ ಟಾಕೀಸ್ ಸ್ವಲ್ಪಭಾಗ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



