ದಾವಣಗೆರೆ: ನಗರದಲ್ಲಿ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ನ ವಿದ್ಯುತ್ ಸರಬರಾಜು ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿದೆ. ಕೆಲವು ಭಾಗಗಳಲ್ಲಿ ಮೂರು ದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಪ್ರಕಟಣೆ ನೀಡಿದೆ.
ಅಕ್ಟೋಬರ್ 28 ರಂದು ಎಮ್.ಸಿ.ಸಿ.ಬಿ ಫೀಡರ್ : ಗುಂಡಿ ಸ್ಕೂಲ್, ಕೊಟ್ಟೂರೇಶ್ವರ ಹೋಟೆಲ್ ಹಿಂಭಾಗ, ಎಂ.ಸಿ.ಸಿ. ಬಿ. ಬ್ಲಾಕ್ ಹಾಗೂ ಸುತ್ತಮುತ್ತ ಪ್ರದೇಶಗಳು.
ಡಿ.ಸಿ.ಎಂ. ಫೀಡರ್ : ಡಿ.ಸಿ.ಎಮ್ ಟೌನ್‍ಶಿಪ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಇನ್ನೂ ಅ.29ರಂದು ಮಹಿಳಾ ಕಾಂಪ್ಲೆಕ್ಸ್, ಬಿಗ್ ಬಜಾರ್, ಜಾಯ್‌ಲುಕ್ಕಾಸ್, ಮಹಾನಗರ ಪಾಲಿಕೆ, ಗುಂಡಿ ಚೌಲ್ಟ್ರಿ ಹಿಂಭಾಗ, ಎಂಸಿಸಿಬಿ ಬ್ಲಾಕ್, ಎವಿಕೆ ಕಾಲೇಜು ರಸ್ತೆ, ಕೋರ್ಟ್ ರಸ್ತೆ, ಮುಸ್ಲಿಂ ಕಾಂಪ್ಲೆಕ್ಸ್, ಹಳೆಯ ಬಸ್ ನಿಲ್ದಾಣ, ಪಿಡಬ್ಲ್ಯೂಡಿ ವಿಭಾಗ, ಪಂಚಾಯತ್ ರಾಜ್, ಶಾಂತಿ ಕಂಫರ್ಟ್ಸ್, ಪಿಜೆ ವಿಸ್ತರಣೆ 1ನೇ ಮತ್ತು 2ನೇ ಮುಖ್ಯರಸ್ತೆ, ರಾಮ್ ಮತ್ತು ಕೋ ಸರ್ಕಲ್, ಪೊಲೀಸ್ ಕ್ವಾರ್ಟರ್ಸ್ ಎಂಎಸ್ ಬಿಲ್ಡಿಂಗ್, ಅರುಣಾ ಥಿಯೇಟರ್, ಪಶು ವೈದ್ಯಕೀಯ ಆಸ್ಪತ್ರೆ, ಸಿತಾರಾ ಹೋಟೆಲ್ ಮತ್ತು ಪಿಸಾಲೆ ಕಾಂಪೌಂಡ್ ಪ್ರದೇಶಗಳು, ಶಂಕರ್ ವಿಹಾರ್ ಬಡಾವಣೆ, ಪಿ.ಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ.
ಬಿಎಸ್‌ಎನ್‌ಎಲ್ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್ ನ್ಯಾಷನಲ್ ಹೋಟೆಲ್, ಪೂಜಾ ಇಂಟರ್‌ನ್ಯಾಷನಲ್ ಹೋಟೆಲ್, ದೇವರಾಜ್‌ಅರಸ್ ಲೇಔಟ್ ಬಿ.ಬ್ಲಾಕ್, ಗಿರಿಯಪ್ಪ ಬಡಾವಣೆ, ಜಿಎಂಐಟಿ ಕಾಲೇಜು, 6ನೇ ಮುಖ್ಯರಸ್ತೆ ಎಂಸಿಸಿ ಬಿ ಬ್ಲಾಕ್, ಲಕ್ಷ್ಮೀ ಫ್ಲೋರ್ ಮಿಲ್, ಕುವೆಂಪು ನಗರ, ಎಸ್‌ಎಸ್ ಬಡಾವಣೆ ಎ ಬ್ಲಾಕ್, ಎಸ್‌ಎಸ್ ಮಹಲ್, ಮಾವಿಂಟಾಪ್ ಆಸ್ಪತ್ರೆ, ಸುತ್ತಮುತ್ತಲಿನ ಪ್ರದೇಶಗಳು, ಕರ್ನಾಟಕ ಬ್ಯಾಂಕ್ ಸುತ್ತಲಿನ ಪ್ರದೇಶ, ಅಂಗವಿಕಲರ ಹಾಸ್ಟೆಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು.
ಅಕ್ಟೋಬರ್ 30 ರಂದು ದಾವಣಗೆರೆಯ ಬೆಸ್ಕಾಂ ವೃತ್ತ ಹಾಗೂ ಕೈಗಾರಿಕೆ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.
ಅಕ್ಟೋಬರ್ 31ರಂದು ಸೋಮವಾರ ಬೆಂಗಳೂರಿನ ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್‌ಎನ್‌ಎಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್, ಪೂಜಾ ಇಂಟರ್‌ನ್ಯಾಷನಲ್ ಹೋಟೆಲ್, ದೇವರಾಜ್ ಅರಸ್ ಲೇಔಟ್ ಬಿ,ಬ್ಲಾಕ್, ಗಿರಿಯಪ್ಪ ಬಡಾವಣೆ ಹಾಗೂ ಜಿಎಂಐಟಿ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.



