ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಶ್ಯಾಗಲೆ ಮತ್ತು 220 ಕೆ.ವಿ ಎಸ್.ಆರ್.ಎಸ್ ದಾವಣಗೆರೆ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತಾಗಿ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 22 ರ ಗುರುವಾರದಂದು ಬೆ.10 ರಿಂದ ಸಂಜೆ.4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಶಾಗಲೆ, ಕಂದಗಲ್ಲು, ಕೋಡಿಹಳ್ಳಿ, ಗೋಣಿವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. 220 ಕೆ.ವಿ. ಎಸ್ ಆರ್ ಎಸ್ : ಹೊಸ ಬೆಳವನೂರು, ಹಳೇ ಬೆಳವನೂರು, ತುರ್ಚಘಟ್ಟ, ಬೆಳವನೂರು, ಮರುಳಸಿದ್ದ ನಗರ, ಬೆಳವನೂರು ಇಂಡಸ್ಟ್ರಿಯಲ್ ಏರಿಯಾ, ಜರೀಕಟ್ಟೆ, ಮುದಹದಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



