ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್08-ವಿಜಯನಗರ, ಎಫ್18-ದುರ್ಗಾಂಬಿಕಾ ಮಾರ್ಗದ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿಯಲ್ಲಿ ಮತ್ತು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಬೇಕಾಗಿರುವುದರಿಂದ ಜು.27 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್08-ವಿಜಯನಗರ ಫೀಡರ್ ವ್ಯಾಪ್ತಿಯ ದೇವರಾಜ್ ಅರಸ್ ಬಡಾವಣೆ ‘ಬಿ’ ಬ್ಲಾಕ್ ಮತ್ತು ‘ಸಿ’ ಬ್ಲಾಕ್, ಎಸ್‍ಪಿ ಆಫೀಸ್, ಆರ್.ಟಿ.ಓ ಆಫೀಸ್, ವಿಜಯನಗರ ಬಡಾವಣೆ, ರಾಜೀವ ಗಾಂಧಿ ಬಡಾವಣೆ, ಎಸ್.ಪಿ.ಎಸ್ ನಗರ 2ನೇ ಹಂತ, ಎಸ್‍ಎಮ್‍ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ,ಶಿವಾಲಿ ಚಿತ್ರ ಮಂದಿರದ ಅಕ್ಕ ಪಕ್ಕ ಹಾಗೂಟೀಚರ್ಸ್ ಕಾಲೋನಿ ಇತರೆ ಪ್ರದೇಶಗಳು.
ಎಫ್18-ದುರ್ಗಾಂಬಿಕಾ ಫೀಡರ್ ವ್ಯಾಪ್ತಿಯ ಎಮ್‍ಬಿ ಕೇರಿ, ಹೊಂಡದ ಸರ್ಕಲ್ ಸುತ್ತಮುತ್ತ, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚಲುವಾದಿ ಕೇರಿ, ಇಡಬ್ಲ್ಯೂಎಸ್ ಕಾಲೋನಿ, ಹಳೇಪೇಟೆ, ಬಾರ್‍ಲೈನ್ ರಸ್ತೆ, ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
220 ಕೆ. ವಿ ಸ್ವೀಕರಣಾ ಕೇಂದ್ರದಿಂದ ಹೊರಡುವ ಎಫ್- 13ಇಂಡಸ್ಟ್ರಿಯಲ್ &ಎಸ್.ಎಸ್. ಹೈಟೆಕ್ ಫೀಡರ್‍ಗಳಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು.27 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-13ಇಂಡಸ್ಟ್ರಿಯಲ್ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾ, ಲೋಕಿಕೆರೆರಸ್ತೆ, ಸುಬ್ರಹ್ಮಣ್ಯನಗರ, ಎಸ್.ಎರವೀಂದ್ರನಾಥ ಬಡಾವಣೆ ಮತ್ತುಸುತ್ತ ಮುತ್ತಲಿನ ಪ್ರದೇಶಗಳು.
ಎಸ್.ಎಸ್. ಹೈಟೆಕ್ ಫೀಡರ್ ವ್ಯಾಪ್ತಿಯ ಎಸ್.ಓ.ಜಿ ಕಾಲೋನಿ ಎ, ಬಿ & ಸಿ ಬ್ಲಾಕ್, ಬುದ್ದ, ಬಸವ ಭೀಮ ನಗರ ,ಕರ್ನಾಟಕ ಬೀಜ ನಿಗಮ, ರಾಮನಗರ, ಇಂಡಸ್ಟ್ರೀಯಲ್ ಏರಿಯಾ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.