ದಾವಣಗೆರೆ: ನಗರದ ರಂಗನಾಥ ಫೀಡರ್‍ಗಳಲ್ಲಿ ಬೆ.ವಿ.ಕಂ ಹಾಗೂ ಕೆ.ಯು.ಐ.ಡಿ.ಎಫ್.ಸಿ.ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ.28 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಮ್.ಸಿ.ಸಿ.ಬಿ ಫೀಡರ್‍ನ ವ್ಯಾಪ್ತಿಯ ಶಾಮನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ, ಬಿ.ಐ.ಇ.ಟಿ. ಕಾಲೇಜು, ಗುಂಡಿ ಛತ್ರದ ಸುತ್ತ ಮುತ್ತ, ಸದ್ಯೋಜಾತ ಮಠದ ಸುತ್ತಮುತ್ತ, ಕಾಸಲ್ ಶೆಟ್ಟಿ ಪಾರ್ಕ್ ಶಾಮನೂರು ಶಿವಶಂಕರಪ್ಪರವರ ನಿವಾಸದ ಸುತ್ತ ಮುತ್ತ ಪ್ರದೇಶಗಳು. ದಾವಣಗೆರೆ: ಬೃಹತ್ ಕೈಗಾರಿಕೆ ಆರಂಭಿಸುವವರಿಗೆ ಹೆಚ್ಚಿನ ಪ್ರೋತ್ಸಾಹ : ಸಚಿವ ಜಗದೀಶ ಶೆಟ್ಟರ್
ರಂಗನಾಥ ಫೀಡರ್‍ನ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ತರಳಬಾಳು ಬಡಾವಣೆ 1 ರಿಂದ ನೇ 6 ಕ್ರಾಸ್ ವರೆಗೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ದಾವಣಗೆರೆ ತಾಲೂಕಿನ ವ್ಯಾಪ್ತಿಯಲ್ಲಿರುವ 66 ಕೆ.ವಿ. ದಾವಣಗೆರೆ-ಚಿತ್ರದುರ್ಗ ಲೈನ್-2ರ ವಾಹಕ ಬಿಗಿಗೊಳಿಸುವ ಕಾರ್ಯದ ಸಲುವಾಗಿ, ಜೈನ್ ಕಾಲೇಜ್ ಸುತ್ತಮುತ್ತಲಿನ ಪ್ರದೇಶ ಮತ್ತು ಆಂಜನೇಯ ಕಾಟನ್ ಮಿಲ್ ಸುತ್ತಮುತ್ತಲಿನ ಪ್ರದೇಶಗಳು ಜ.28 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.ಶೀಘ್ರದಲ್ಲಿ ಜಗಳೂರಿನ 57 ಕೆರೆಗಳಿಗೆ ನೀರು : ಜಿಲ್ಲಾ ಉಸ್ತುವಾರಿ ಸಚಿ ಭೈರತಿ ಬಸವರಾಜ್



