ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿ ಲಿಮಿಟೆಡ್ ಯೋಜನೆಯಡಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಮತ್ತು ಜಲಸಿರಿ ಯೋಜನೆಯಡಿ ಕಾಮಗಾರಿ ಕೆಲಸಗಳಿರುವುದರಿಂದ 66/11 ಕೆವಿ ದಾವಣಗೆರೆ/ಆವರಗೆರೆ/ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್11-ಎಲ್‍ಎಫ್1, ಎಫ್16-ಗೊಶಾಲೆ, ಎಫ್6-ಶಿವಾಲಿ, ಎಫ್-08 ವಿಜಯನಗರ ಮತ್ತು ಎಫ್19-ಎಸ್‍ಟಿಪಿ, 11 ಕೆವಿ ಮಾರ್ಗಗಳ ಈ ಕೆಳಕಂಡ ಪ್ರದೇಶಗಳಲ್ಲಿ ಮಾ. 13 ರಂದು ಬೆಳಿಗ್ಗೆ 10 ರಿಂದ ಸಂಜೆ 4.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಫ್11-ಎಲ್‍ಎಫ್1 ವ್ಯಾಪ್ತಿಯಲ್ಲಿ 11 ಕೆವಿ ಮಾರ್ಗದ ಮಂಡಿಪೇಟೆ, ಅಶೋಕ ಟಾಕೀಸ್, ಬಿನ್ನಿ ಕಂಪನಿ ರಸ್ತೆ, ಮಹಾವೀರ ರಸ್ತೆ, ಕೆಆರ್‍ರಸ್ತೆ, ಗಡಿಯಾರ ಕಂಬ, ಬಿಟಿ ಗಲ್ಲಿ, ಬೆಳ್ಳೂಡಿ ಗಲ್ಲಿ, ಇಸ್ಲಾಂಪೇಟೆ, ಹೆರಿಗೆ ಆಸ್ಪತ್ರೆ, ಪೋಸ್ಟ್ ಆಫೀಸ್, ರೈಲ್ವೇ ಸ್ಟೇಷನ್, ವಿಜಯಲಕ್ಷ್ಮೀ ರಸ್ತೆ ಸ್ವಲ್ಪಭಾಗ, ವಸಂತ ಟಾಕೀಸ್ ಸ್ವಲ್ಪಭಾಗ ಹಾಗೂ ಇತರೆ ಪ್ರದೇಶಗಳು.
ಎಫ್16-ಗೊಶಾಲೆ ವ್ಯಾಪ್ತಿಯಲ್ಲಿ 11 ಕೆವಿ ಮಾರ್ಗದ ಗೋಶಾಲೆ, ಪಿ.ಬಿ.ರಸ್ತೆ, ರವಿ ಮಿಲ್ ಕ್ವಾರ್ಟಸ್, ಮಹೀಂದ್ರಾ ಶೋ ರೂಂ ಹತ್ತಿರ ಇರುವ ವರ್ಕ್‍ಷಾಪ್‍ಗಳು, ಕಾಮತ್ ಹೋಟೆಲ್ ಅಕ್ಕಪಕ್ಕ, ಸುಭಾಷ್ ರಿಪ್ರೆಶ್‍ಮೆಂಟ್ ಸುತ್ತಮುತ್ತ ಪ್ರದೇಶಗಳು.
ಎಫ್6-ಶಿವಾಲಿ ವ್ಯಾಪ್ತಿಯಲ್ಲಿ 11 ಕೆವಿ ಮಾರ್ಗದ ಬಾಷನಗರ 1 ರಿಂದ 17ನೇ ಕ್ರಾಸ್, ರಿಂಗ್‍ರಸ್ತೆ, ಶಿವನಗರ ಸ್ವಲ್ಪ ಭಾಗ, ಮಿಲ್ಲತ್ ಕಾಲೋನಿ, ಬೀಡಿ ಲೇಔಟ್, ರಜಾವುಲ್ಲಾ ಮುಸ್ತಾಫ ನಗರ, ರಜಾಕ್ ಸರ್ಕಲ್, ಬೀಡಿ ಲೇಔಟ್, ಶಿವನಗರ, ಇಎಸ್‍ಐಆಸ್ಪತ್ರೆ ಹಿಂಭಾಗ ಹಾಗೂ ಮುಂಭಾಗ, ಬÁಷನಗರ ಮುಖ್ಯರಸ್ತೆ ಸುತ್ತಮುತ್ತ ಪ್ರದೇಶಗಳು.
ಎಫ್-08 ವಿಜಯನಗರ ವ್ಯಾಪ್ತಿಯಲ್ಲಿ ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್ ಮತ್ತು ಸಿ ಬ್ಲಾಕ್, ಎಸ್‍ಪಿ ಆಫೀಸ್, ಆರ್‍ಟಿಓ ಆಫೀಸ್, ವಿಜಯನಗರ ಬಡಾವಣೆ, ರಾಜೀವಗಾಂಧಿ ಬಡಾವಣೆ, ಎಸ್‍ಪಿಎಸ್ ನಗರ 2ನೇ ಹಂತ, ಎಸ್‍ಎಮ್‍ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



