ದಾವಣಗೆರೆ: ಎಮ್.ಸಿ.ಸಿ.ಬಿ ಫೀಡರ್‍ನಲ್ಲಿ ಬೆ.ವಿ.ಕಂ ಹಾಗೂ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಎಮ್.ಸಿ.ಸಿ.ಬಿ ವ್ಯಾಪ್ತಿಯ ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಗ್ಲಾಸ್‍ಹೌಸ್, ಬಿ.ಐ.ಇ.ಟಿ. ಕಾಲೇಜು, ಬಿಂದಾಸ್ ಬಾರ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
66 ಕೆವಿ ಕುಕ್ಕುವಾಡ ಹಾಗೂ 66 ಕೆವಿ ಹರಿಹರ-ಹೊಸಪೇಟೆ ಮಾರ್ಗಗಳ ಕ್ರಾಸ್ ಬಸ್‍ನ ವಾಹಕ ಬದಲಾವಣೆ ಕಾಮಗಾರಿ ನಿರ್ವಹಿಸುವುದರಿಂದ ಫೆ.20 ರಂದು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ 66/11ಕೆವಿ ಕುಕ್ಕುವಾಡ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕುಕ್ಕುವಾಡ, ಹದಡಿ, ಕೈದಾಳೆ, ಕೋಲುಕುಂಟೆ, ಕನಗೊಂಡನಹಳ್ಳಿ, ನಾಗರಸನಹಳ್ಳಿ, ಮತ್ತಿ, ಗಿರಿಯಾಪುರ, ಲೋಕಿಕೆರೆ, ಕಲ್ಬಂಡೆ, ಬಲ್ಲೂರು, ಹೂವಿನಮಡು, ಕಲ್ಕರೆ ಗ್ರಾಮಗಳಿಗೆ ಮತ್ತು 66/11ಕೆವಿ ಶ್ಯಾಗಲೆ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಶ್ಯಾಗಲೆ, ಕೋಡಿಹಳ್ಳಿ, ಕಂದಗಲ್ಲು, ಮತ್ತು ಗೋಣಿವಾಡ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



