ದಾವಣಗೆರೆ : ಡಿ.12 ರಂದು ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬಸವೇಶ್ವರ ಫೀಡರ್ ಹಾಗೂ ನಿಜಲಿಂಗಪ್ಪ ಫೀಡರ್‍ಗಳಲ್ಲಿ 24*7 ಜಲಸಿರಿ ಕಾಮಗಾರಿ ಅಡಿಯಲ್ಲಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಸವೇಶ್ವರ ಫೀಡರ್ ವ್ಯಾಪ್ತಿಯ ಎಸ್.ಎಸ್. ಬಡಾವಣೆ, ಬಿ ಬ್ಲಾಕ್, ಶಾಂತಿನಗರ, ಕುಂದುವಾಡ ರಸ್ತೆ, ಮಹಾನಗರಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡಕೆರೆಹಾಗು ಸುತ್ತಮುತ್ತ ಪ್ರದೇಶಗಳು.ಎಸ್. ನಿಜಲಿಂಗಪ್ಪ ಫೀಡರ್ ವ್ಯಾಪ್ತಿಯ ನಿಜಲಿಂಗಪ್ಪ ಬಡಾವಣೆ, ರಿಂಗ್‍ರೋಡ್, ಕುಂದವಾಡರಸ್ತೆ, ಯಲ್ಲಮ್ಮ ನಗರ, ವಿನೋಬನಗರ 4ನೇ ಮೇನ್, 3ನೇಮೇನ್ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.



