ದಾವಣಗೆರೆ: ಸರ್ಕಾರವು ಗ್ಯಾರಂಟಿ ಯೋಜನೆ ಮೂಲಕ ಜನರಿಗೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು, ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ವಿದ್ಯುತ್ ದರ ಏರಿಕೆಯಿಂದ ಇಂಡಸ್ಟ್ರೀಸ್ ಗೆ ಹೊಡೆತ ಬಿದ್ದಿದೆ. ಇಂಡಸ್ಟ್ರಿಗಳು ಉಳಿಯುವುದು ಕಷ್ಟ ಆಗಿದೆ. ಮಾತು ಕೊಟ್ಟಂತೆ ನಡೆದುಕೊಂಡು ವಿದ್ಯುತ್ ದರ ಏರಿಕೆ ಬಗ್ಗೆ ಆಮೇಲೆ ತೀರ್ಮಾನ ತೆಗೆದುಕೊಳ್ಳಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.
ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾವು ಮಾಡಿಲ್ಲ ಎನ್ನುತ್ತಿದ್ದಾರೆ. ವಿದ್ಯುತ್ ದರ ಏರಿಕೆ ಬಿಜೆಪಿ ಕಾಲದಲ್ಲೇ ಆಗಿತ್ತು. ಬಿಜೆಪಿಯವರು ಅದಕ್ಕೆ ಸಹಿ ಮಾಡಿಲ್ಲ. ಕಾಂಗ್ರೆಸ್ನವರು ಸಹಿ ಮಾಡಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಅದನ್ನು ಕಾಂಗ್ರೆಸ್ ನವರು ಒಪ್ಪಬಾರದು. ಹಿಂದೆ ದರವನ್ನೇ ಮುಂದುವರಿಸಬೇಕು. ಮಾತು ಕೊಟ್ಟಂತೆ 200 ಯೂನಿಟ್ ಫ್ರೀ ಕೊಡಬೇಕು ಎಂದು ಹೇಳಿದರು.
ಶಕ್ತಿ ಯೋಜನೆಗೆ ಆಧಾರ್ , ಸ್ಮಾರ್ಟ್ ಕಾರ್ಡ್ ತರಬೇಕು ಎಂದು ನಿರ್ಬಂಧ ಹಾಕಬಾರದು. ನೋಡಿದ ತಕ್ಷಣ ಗೊತ್ತಾಗುತ್ತೇ ಹೆಣ್ಣೋ, ಗಂಡೋ ಎಂದು. ಅದಕ್ಕೆ ದಾಖಲೆ ಯಾಕೆ ಬೇಕು ಎಂದು ಪ್ರಶ್ನಿಸಿದರು. ಖಾಸಗಿ ಬಸ್ ಗಳಿಗೆ ನಷ್ಟವಾದ್ರೆ, ನಾವು ಏನು ಮಾಡುವುದಕ್ಕೆ ಆಗಲ್ಲ ಎಂದರು.



