ದಾವಣಗೆರೆ: ಜಿಲ್ಲೆಯಲ್ಲಿ ನಾನು, ಜಗಳೂರು ದೇವೇಂದ್ರಪ್ಪ, ಮಾಯಕೊಂಡದ ಕೆ.ಎಸ್.ಬಸವಂತಪ್ಪ ಹೊಸ ಶಾಸಕರಿದ್ದೇವೆ. ಮೂವರಲ್ಲಿ ಯಾರಿಗಾದರೂ ಒಬ್ಬರಿಗೆ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡಲಿ. ಹಿರಿತನದ ಆಧಾರದಲ್ಲಿ ಕೊಟ್ಟರೆ ಹೊನ್ನಾಳಿಯ ಡಿ.ಜಿ. ಶಾಂತನಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ಶಾಸಕ ಬಸವರಾಜ್ ವಿ. ಶಿವಗಂಗಾ ಅಭಿಪ್ರಾಯಪಟ್ಟರು.
ಸಿಎಂ ಬದಲಾವಣಗೆ ಬಗ್ಗೆ ಜನವರಿಯಲ್ಲಿ ಮಾತನಾಡುವೆ
ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಡಿಸೆಂಬರ್ ಮುಗಿಯುವವರೆಗೂ ಏನೂ ಮಾತನಾಡುವುದಿಲ್ಲ. ಜನವರಿ 1 ರಂದು ಮಾತನಾಡುತ್ತೇನೆ ಎನ್ನುವ ಮೂಲಕ ನಾಯಕತ್ವದ ಬದಲಾವಣೆ ಸೂಚನೆ ನೀಡಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ, ಹೊಸಬರಿಗೆ ಅವಕಾಶ ನೀಡಿದರೆ ಯಾರು ಬೇಡ ಎನ್ನುತ್ತಾರೆ. ನನ್ನ ಅಜೆಂಡಾನೇ ಬೇರೆ ಇದೆ ಎಂದರು.
15 ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಿ
ಸಂಪುಟ ವಿಸ್ತರಣೆಯ ವೇಳೆ ಹೊಸದಾಗಿ 15 ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು. ಹಳೆ ಬೇರು, ಹೊಸ ಚಿಗುರು ಅನ್ನುವಂತೆ ಅಭಿವೃದ್ಧಿ ಕೆಲಸ ಆಗುತ್ತವೆ. ಹೊಸ ಶಾಸಕರು ಹೊಸ ಆಲೋಚನೆಯೊಂದಿಗೆ ಹಲವಾರು ಅಭಿ ವೃದ್ಧಿ ಕಾರ್ಯಗಳು ಸರಾಗವಾಗಿ ಆಗುತ್ತವೆ. ನೂತನವಾಗಿ ಆಯ್ಕೆಯಾಗಿರುವಂತಹ 15 ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದರು.



