ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ದುರಂಹಕಾರ ಮಾತು ಬಿಡಬೇಕು. ಹಿಂದೂಗಳನ್ನು ಒದ್ದು ಒಳಗೆ ಹಾಕಲು ಇದೇನೂ ಪಾಕಿಸ್ತಾನನಾ..? ಎಂದು ಶಾಸಕ ಬಿ.ಪಿ.ಹರೀಶ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಂ ಹಬ್ಬದ ದಿನವೇ ಗಣಪತಿ ವಿಸರ್ಜನೆ ಮಾಡಬೇಕಾ..? ಮುಸ್ಲಿಂ ಹೆಚ್ಚಿರುವ ಪ್ರದೇಶದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟಬೇಕಾ..? ಎಂದಿರುವ ಜಿಲ್ಲಾ ಉಸ್ತುವಾರಿ ಎಸ್. ಎಸ್. ಮಲ್ಲಿಕಾರ್ಜುನ್, ಹಿಂದೂ ಬದ್ಧ ವೈರಿಗಳಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಹಿಂದೂಗಳನ್ನು ಒದ್ದು ಒಳಗೆ ಹಾಕಿಸ್ತೇನೆ ಎಂದು ಹೇಳುವ ಜಿಲ್ಲಾ ಸಚಿವರು. ಇನ್ನೊಂದೆಡೆ ಪೊಲೀಸರು ಸಚಿವರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರನ್ನು ಅವರ ಮನೆಯಾಳು ಎಂಬಂತೆ ಕಾಣುತ್ತಿದ್ದಾರೆ. ಮಲ್ಲಿಕಾರ್ಜುನ್ ಅಧಿಕಾರದ ಭ್ರಷ್ಟಾಚಾರದ ಹಣದ ಅಮಲಿನಲ್ಲಿ ತೇಲುತ್ತಿದ್ದಾರೆ. ಈ ಅಧಿಕಾರದ ಮದ ಮಲ್ಲಿಕಾರ್ಜುನ್ ಅವರಿಗೆ ಒಳ್ಳೆಯದಲ್ಲ ಎಂದರು.
ಹಿಂದೂಗಳ ಬಗ್ಗೆ ಮಾತನಾಡಿದ್ರೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು, ಅವರು ಅಲ್ಪಸಂಖ್ಯಾತರ ಪರವಾಗಿ ಮಾತನಾಡಿದ್ರೆ ರಾಜಕೀಯ ಅಲ್ಲವಾ ಎಂದು ಪ್ರಶ್ನಿಸಿದರು.



