ದಾವಣಗೆರೆ: ಚುನಾವಣೆ ಎಂದ್ಮೇಲೆ ಸೋಲು ಗೆಲುವು ಸಹಜ. ಸೋತ ಬಳಿಕ ಸುಮ್ಮನೆ ಅರಾಮಾಗಿ ಇರಬೇಕೇ ಹೊರತು, ಸ್ವಪಕ್ಷೀಯರ ವಿರುದ್ಧವೇ ಟೀಕೆ ಮಾಡಿಕೊಂಡು ಓಡಾಡದಲ್ಲ ಶಾಸಕ ಡಾ. ಶಾಮನೂರು ಶಿವ ಶಂಕರಪ್ಪ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯ ಗಂಡ ಸಿದ್ದೇಶ್ವರ ನನ್ನ ಅಳಿಯ. ದಿನಕ್ಕೊಂದು ಪ್ರಲಾಪಮಾಡಿಕೊಂಡು, ಅಳುತ್ತಿದ್ದಾರೋ ಗೊತ್ತಿಲ್ಲ. ಭೀಮಸಮುದ್ರದಿಂದ ದಾವಣಗೆರೆಗೆ ಬರುವಾಗದೇನು ತಂದಿದ್ರು ಕೇಳಿ. ಸುಮ್ಮನೆ ಅರಾಮಾಗಿ ಮನೆಯಲ್ಲಿ ಇರದು ಬಿಟ್ಟು ಸ್ವಪಕ್ಷ ಟೀಕೆ ಮಾಡುವುದಾದ್ರೆ, ಎಷ್ಟು ಸೊಕ್ಕು ಬಂದಿರಬೇಕು ಎಂದು ಕಿಡಿಕಾರಿದರು.
ಗಣಪತಿ ಪ್ರತಿಷ್ಠಾಪನೆಗೆ ಹಂದರಗಂಬ ಪೂಜೆ ನೆರವೇರಿಸಿದ್ದೇವೆ. ಚೆನ್ನಾಗಿ ನಡೆದಿದೆ. ಈ ಬಾರಿಯೂ ಗಣೇಶೋತ್ವವ ಅದ್ಧೂರಿಯಾಗಿ, ಶಾಂತಿಯುತವಾಗಿ ನೆರವೇರಲಿ ಎಂದು ಆಶಿಸುತ್ತೇನೆ. ಇಲ್ಲಿ ರಾಜಕೀಯ ಬೇಡ ಎಂದರು.