ದಾವಣಗೆರೆ: ಸಿಎಂ ಬದಲಾವಣೆ ಬಗ್ಗೆ ಭವಿಷ್ಯ ಹೇಳೋಕೆ ಪ್ರಿಯಾಂಕ್ ಖರ್ಗೆ ಶಾಸ್ತ್ರ ಹೇಳೋರಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವಧಿ ಪೂರೈಸುತ್ತಾರೆ. ಅವರ ನೇತೃತ್ವದಲ್ಲಿ 2023ರ ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ನನಗೆ ಬಿಟ್ ಕಾಯಿನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಿಟ್ ಕಾಯಿನ್ ಅಂದ್ರೇನು ಗೊತ್ತಿಲ್ಲ. ಬ್ಯಾಂಕ್‌ಗಳ ಕರೆನ್ಸಿ ಗೊತ್ತು. ಬಿಟ್ ಅಂದ್ರೆ ಗೊತ್ತಿಲ್ಲ. ನಮ್ಮ ವ್ಯವಹಾರ ಇರೋದು ಸ್ಥಳೀಯ ಬ್ಯಾಂಕ್‌ಗಳಲ್ಲಿ ಎದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಹಾಕಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ , ಸಿಎಂ ಬದಲಾವಣೆ ಆಗುತ್ತೆ, ಮೂರನೇ ಮುಖ್ಯಮಂತ್ರಿ ಬರ್ತಾರೆ ಎಂದಿದ್ದರು.



