ದಾವಣಗೆರೆ: ನಾವು ಯಾವುದೇ ಕುಕ್ಕರ್ಗಳನ್ನು ಮತದಾರರಿಗೆ ಹಂಚಿಲ್ಲ. ಅದರ ಬಗ್ಗೆ ನನಗೆ ಏನು ಗೊತ್ತಿಲ್ಲ. ನಮ್ಮ ಅಭಿಮಾನಿಗಳು, ಗೆಳೆಯರು ಹಂಚಿರಬಹುದು ಅಥವಾ ಇದು ಬಿಜೆಪಿ ಕೆಲಸವೂ ಇರಬಹುದು ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಶಾಮನೂರು ಶಿವಶಂಕರಪ್ಪ ಹಾಗೂ ತಮ್ಮ
ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ
ಮತದಾರರಿಗೆ ಕುಕ್ಕರ್ ಹ೦ಚಿದ ಬಗ್ಗೆ ಪ್ರಕರಣ ದಾಖಲಾದ ಕುರಿತು ಈ ರೀತಿ ಪ್ರತಿಕ್ರಿಯಿಸಿದರು. ಹಿಂದೆ ವನ್ಯ ಜೀವಿ ವಿಷಯದಲ್ಲೂ ಈ ರೀತಿ ಮಾಡಿದ್ದರು. ಈಗಲೂ ಅದೇ ರೀತಿ ಮಾಡಿಸಿರಬಹುದು ಎಂದರು.
ಕಾಂಗ್ರೆಸ್ ಪಕ್ಷ ಈಗಾಗಲೇ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಬಿಡುಗಡೆಯಾಗಲಿದ್ದು, ನಮ್ಮಲ್ಲಿ ಸ್ವಲ್ಪ ಗೊಂದಲವಿರುವ ಕಾರಣಕ್ಕೆ ಸಭೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯೂ ಶೀಘ್ರ ಬಿಡುಗಡೆಯಾಗುತ್ತಿದೆ ಎಂದರು.
ಹೈಕಮಾಂಡ್ ಹೇಗೆ ಹೇಳಿತ್ತೋ ಅದೇ ರೀತಿ ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಯಾವುದೇ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು. ನಾವು ದಾವಣಗೆರೆಯಿಂದ ಸ್ಪರ್ಧೆ ಮಾಡುವಂತೆ ಕೇಳಿದ್ದೇವೆ. ಈ ವಿಚಾರದಲ್ಲಿ ನಮ್ಮ ಹೈಕಮಾ೦ಡ್ ಅ೦ತಿಮ ನಿರ್ಧಾರ ಕೈ ಗೊಳ್ಳಲಿದೆ ಎಂದರು.
ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಯಾರಾದರೂ ಸ್ಪರ್ಧೆ ಮಾಡಲಿ. ನಮಗೇನೂ ಸಮಸ್ಯೆ ಇಲ್ಲ. ನನ್ನ ಹತ್ತಿರ ಏನಿದೆ. ಐಟಿ ದಾಳಿ ಮಾಡಲು? ಎಲ್ಲವೂ ಅವನ ಹತ್ತಿರವೇ ಇರದು
ಎಂದು ಸಂಸದ (ಜಿಎಂ ಸಿದ್ದೇಶ್ವರ) ವಿರುದ್ಧ ಕಿಡಿಕಾರಿದರು.



