ದಾವಣಗೆರೆ: ದಾವಣಗೆರೆ ದಕ್ಷಿಣ ಮತದಾರರು ಬದಲಾವಣೆ ಬಯಸಿದ್ದು, ಇಷ್ಟು ವರ್ಷ ತಪ್ಪು ಮಾಡಿದ್ದೇವೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಹೀಗಾಗಿ ಅಲ್ಪ ಸಂಖ್ಯಾತರು ಸಹಿತ ಎಲ್ಲರ ಬೆಂಬಲ ಬಿಜೆಪಿಗಿದೆ ಎಂದು ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಬಿ.ಜಿ. ಅಜಯಕುಮಾರ್ ಅಭಿಪ್ರಾಯಪಟ್ಟರು.
ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ದಕ್ಷಿಣದ ಮತದಾರರಿಗೆ ಇಷ್ಟು ವರ್ಷ ತಾವು ತಪ್ಪು ಮಾಡಿದ್ದೇವೆ೦ಬುದು ಈಗ ಗೊತ್ತಾಗಿದೆ. ಹೋದಲ್ಲೆಲ್ಲಾ ಜನರಿಂದ ಇಂತಹ ಮಾತುಗಳೇ ಕೇಳಿ ಬರುತ್ತಿವೆ.ನಮ್ಮ ಮನೆಗೆ ಬರುವ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಬೇಕು. ಅಭ್ಯರ್ಥಿ ಮನೆಗೆ ನಾವು ಹೋಗುವುದು ಬೇಡವೆ೦ಬ ಅಭಿಪ್ರಾಯ ಜನರಿಂದಲೇ ಬರುತ್ತಿದೆ ಎಂದರು.
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ನಮ್ಮ ಪಕ್ಷ, ಜನರಿಗೆ ಸುಲಭವಾಗಿ ಸಿಗಲಿದ್ದು, ಹಾಗಾಗಿ ಅಲ್ಪ ಸಂಖ್ಯಾತರ ಪೈಕಿ ಶೇ.70ರಷ್ಟು ನಮ್ಮದು ಎಲ್ಲಾ ಜನರು ನಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ.ಈಗಾಗಲೇ ಎಲ್ಲರೂ ಸ್ಪ೦ದಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಬೆಂಬಲ ಹಾಗೂ ಸಹಕಾರ ತಮಗೆ ಇದೆಯೆ೦ಬ ಮಾತು ಕೇಳಿ ಬರುತ್ತಿವೆ. ದಾವಣಗೆರೆಯಲ್ಲಿ ಸೌಹಾರ್ದಯುತವಾಗಿ ಚುನಾವಣೆಯನ್ನು ಎದುರಿಸುತ್ತೇವೆ. ಬಿಜೆಪಿಯದ್ದೇ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ಕಾಯಿಪೇಟೆಯಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ.ಅಜಯಕುಮಾರ ಪ್ರಚಾರ ಕಾರ್ಯಾಲಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ ಉದ್ಘಾಟಿದರು. ಜಿಲ್ಲಾಧ್ಯಕ್ಷ ವೀರೇಶ ಹನಗವಾಡಿ, ಯಶವಂತರಾವ್ ಜಾಧವ್, ಬಿ.ಎಂ.ಸತೀಶ, ದೇವರಮನಿ ಶಿವಕುಮಾರ ಇತರರಿದ್ದರು.



