ದಾವಣಗೆರೆ: ಕಳ್ಳತನವಾದ ಕಾರನ್ನು ಮೂಲ ಮಾಲೀಕರಿಗೆ ನೀಡದೇ ಸ್ವಂತಕ್ಕೆ ಬಳಸಿದಲ್ಲದೆ, ಕಾರಿನ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅಮಾನತು ಮಾಡಿದ್ದಾರೆ.
ದಾವಣಗೆರೆಯ ಹದಡಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಮಂಜುನಾಥ್ ಕಳ್ಳತನವಾದ ಕಾರನ್ನು ಕಾರಿನ ಮಾಲೀಕರು ದೂರು ಕೊಟ್ಟಿದ್ದರು ಕಾರು ಸಿಕ್ಕಿಲ್ಲ ಎಂದು ಹೇಳಿ ಆ ಕಾರಲ್ಲೆ ಬಿಟ್ಟಿ ಶೋಕಿ ಮಾಡಲು ವಿದ್ಯಾ ನಗರದ ಕಾಫಿ ಡೇ ಗೆ ಬಂದಿದ್ದರು
ಅದನ್ನು ಕಂಡ ಕಾರಿನ ಮಾಲೀಕರು ಕಾರನ್ನು ಕೇಳಿದಾಗ ಕಾರನ್ನು ಕೊಡದೆ ಹಲ್ಲೆ ಮಾಡಿದ್ದಾರೆ😡 pic.twitter.com/CFa1lb3pyf— ಚೇತನ್ ಸೂರ್ಯ ಎಸ್ – Chethan Surya S (@Chethan_Surya_S) June 8, 2022
ಕಳ್ಳತನವಾದ ಕಾರನ್ನು ಸ್ವಂತಕ್ಕೆ ಬಳಿಸಿಕೊಂಡು ಓಡಾಡುತ್ತಿದ್ದನ್ನು ಕಂಡ ಮಾಲೀಕ, ಇದು ನನ್ನ ಕಾರು. ಕಳ್ಳತನವಾದ ಬಗ್ಗೆ ದೂರು ನೀಡಿದ್ದೇನೆ. ವಾಪಾಸ್ ಕೊಡಿ ಅಂತ ಕೇಳಿದ್ದಾರೆ. ಇದಕ್ಕೆ ಹದಡಿ ಪೊಲೀಸ್ ಪೇದೆ, ಮಾಲೀಕನ ಮೇಲೆ ಹಲ್ಲೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧ ಇದೀಗ ಪೇದೆಯನ್ನು ಅಮಾನತು ಮಾಡಲಾಗಿದೆ.
ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಕಾರು ಮಾಲೀಕ ಗಿರೀಶ್ ಎಂಬುವರ ಎರಡು ಕಾರುಗಳನ್ನು ಬಾಡಿಗೆ ಪಡೆದು ತೆರಳಿದ್ದ ಪರಮೇಶ್ ಎಂಬಾತ, 6 ತಿಂಗಳು ಕಳೆದ್ರು ಕಾರನ್ನು ವಾಪಾಸ್ ಕೊಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಪರಮೇಶ್ ತೆಗೆದುಕೊಂಡು ಹೋಗಿರುವಂತ ಇನೋವಾ ಹಾಗೂ ಮಾರುತಿ ಬ್ರೀಜಾ ಕಾರಗಳನ್ನು ವಾಪಾಸ್ ನೀಡಿಲ್ಲ. ಅವರು ಪತ್ತೆಯಾಗಿಲ್ಲ. ಪತ್ತೆ ಹಚ್ಚಿ ಕಾರು ವಾಪಾಸ್ ಕೊಡಿಸುವಂತೆ ಮೇ.18ರಂದು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅತ್ತ ಪರಮೇಶ್ ತೆಗೆದುಕೊಂಡು ಹೋಗಿದ್ದ ಕಾರು ವಾಪಾಸ್ ಬಾರದೇ, ಬ್ಯುಸಿನೆಸ್ ನಡೆಯದೇ ಕಾರು ಕೊಳ್ಳೋದಕ್ಕಾಗಿ ಇನ್ನೋವಾ ಕಾರಿನ ಮೇಲೆ ಮಾಡಿದ 10 ಲಕ್ಷ ಸಾಲ ಕಟ್ಟದ ಕಾರಣ, ನೋಟಿಸ್ ಕೂಡ ಬರ್ತಾ ಇತ್ತು. ಇದರಿಂದ ಕಾರು ಮಾಲೀಕ ಗಿರೀಶ್ ಗೆ ದಿಕ್ಕೇ ತೋಚದಂತೆ ಆಗಿತ್ತು. ಇದೇ ಚಿಂತೆಯಲ್ಲಿ ಪೊಲೀಸರನ್ನು ವಿಚಾರಿಸುತ್ತಾ, ಕಾರು ಇಂದು, ನಾಳೆ ಸಿಗಬಹುದು ಎಂಬ ಆಶಾವಾದದಲ್ಲೇ ಗಿರೀಶ್ ದಿನ ದೂಡುತ್ತಿದ್ದರು.
ಕಳೆದ ಮೇ.31ರಂದು ವಿದ್ಯಾನಗರದಲ್ಲಿನ ಕಾಫಿ ಡೇಯಲ್ಲಿ ಮಾಲೀಕ ಗಿರೀಶ್ ಕಾಫಿ ಕುಡಿದು, ಹೊರ ಬಂದಾಗ, ಅದೇ ಕಾಫಿ ಡೇ ಮುಂದೆ ತನ್ನ ಮಾರುತಿ ಬ್ರೀಜಾ ಕಾರು ಕಂಡಿದೆ. ಅಚ್ಚರಿಯಿಂದ ತನ್ನ ಕಾರು ಕಂಡ ಗಿರೀಶ್ ಅದನ್ನು ಮೊಬೈಲ್ ನಲ್ಲಿ ವೀಡಿಯೋ ಚಿತ್ರಿಸಿಕೊಂಡಿದ್ದಾರೆ. ಇದನ್ನು ಕಂಡ ಅಲ್ಲಿಗೆ ಅದೇ ಕಾರಿನಲ್ಲಿ ಬಂದಂತ ಹಡದಿ ಪೊಲೀಸ್ ಠಾಣೆಯ ಪೇದೆ ಮಂಜುನಾಥ್ ಹಾಗೂ ಪಿಎಸ್‌ಐ ರೂಪ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಈ ವೇಳೆಯ ಕಾರು ಮಾಲೀಕ ಇದು ನನ್ನ ಕಾರು. ಈ ಕಾರು ಕಳವಾದ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದೇನೆ. ಕಳವಾದ ಕಾರು ಸಿಕ್ಕಾಗ ಠಾಣೆಯ ಮುಂದೆ ನಿಲ್ಲಿಸಬೇಕು. ಮಾಲೀಕರಿಗೆ ಮಾಹಿತಿ ನೀಡಿ ವಾಪಾಸ್ ಹಿಂದಿರುಗಿಸಬೇಕು. ಅದನ್ನು ಬಿಟ್ಟು ಕಳ್ಳತನದ ಕಾರಿನಲ್ಲಿ ಓಡಾಡುತ್ತಿದ್ದಿರಲ್ಲಾ ಇದು ಸರಿಯಾ ಎಂಬುದಾಗಿ ಪ್ರಶ್ನಿಸಿ, ಗಲಾಟೆ ಮಾಡಿದ್ದಾರೆ. ಈ ವೇಳೆ ಪೇದೆ ಮಂಜುನಾಥ್, ಮಾಲೀಕ ಗಿರೀಶ್ ಮೇಲೆ ಹಲ್ಲೆ ಮುಂದಾಗಿದ್ದರು.



