ದಾವಣಗೆರೆ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ದಾವಣಗೆರೆ ಪೂರ್ವ ವಲಯದ ಪುರುಷರ ಕಬಡ್ಡಿ ತಂಡ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ತಂಡವು ದ್ವೀತೀಯ ಸ್ಥಾನವನ್ನು ಪಡೆದಿಸೆ.
ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್ ಎರಡು ತಂಡದ ಸದಸ್ಯರುಗಳಿಗೆ ಇಂದು (ಜು.8) ಕಚೇರಿಯಲ್ಲಿ ಬಹುಮಾನ ವಿತರಿಸಿ ಅಭಿನಂದಿಸಿದರು.
ಮುಂದಿನ ದಿನಗಳಲ್ಲಿ ಹೆಚ್ಚು ತರಬೇತಿ ಹಾಗೂ ಅಭ್ಯಾಸ ಮಾಡಿ ಉತ್ತಮವಾಗಿ ಕ್ರೀಡೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಈ ಸಂಧರ್ಭದಲ್ಲಿ ಪೂರ್ವ ವಲಯ ಬೆರಳು ಮುದ್ರೆ ಘಟಕದ ಡಿವೈಎಸ್ಪಿ ರುದ್ರೇಶ್ ಎ.ಕೆ, ಐಜಿಪಿ ಕಚೇರಿಯ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ, ಪೂರ್ವ ವಲಯ ತಂಡದ ವ್ಯವಸ್ಥಾಪಕ ಸುರೇಶ್ ಸಗರಿ ಸ, ಪೊಲೀಸ್ ನಿರೀಕ್ಷಕ ಲಕ್ಷ್ಮಣ್ ನಾಯ್ಕ್ ಉಪಸ್ಥಿತರಿದ್ದರು