ದಾವಣಗೆರೆ: ನಗರದ ಮಂಡಿಪೇಟೆಯ ಚಿನ್ನ, ಬೆಳ್ಳಿ ಅಂಗಡಿಯಲ್ಲಿ 18ಲಕ್ಷ ರೂ. ಮೌಲ್ಯದ ಸ್ವತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿ ಗಸ್ತು, ನಾಕಾಬಂಧಿ ಯಲ್ಲಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮೂವರು ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಿ ಎಸ್ಪಿ ಉಮಾ ಪ್ರಶಾಂತ್ ಆದೇಶ ಹೊರಡಿಸಲಾಗಿದೆ.
ದಾವಣಗೆರೆ: ಮತ್ತೆ ಅಡಿಕೆಗೆ ಭರ್ಜರಿ ಬೆಲೆ; 54 ಸಾವಿರ ಗಡಿ ಸನಿಹ…!!
ಬಸವನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮಂಜಪ್ಪ, ಕಾನ್ ಸ್ಟೇಬಲ್ ಪಿ.ಆಕಾಶ್ ಹಾಗೂ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಹಿರಿಯ ಕಾನ್ ಸ್ಟೇಬಲ್ ಎಚ್. ಚಂದ್ರಶೇಖರರನ್ನು ಅಮಾನತು ಮಾಡಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೇ.10ರವರೆಗೆ ಇ-ಖಾತಾ ಅಭಿಯಾನ
ಜ.29ರಂದು ದಾವಣಗೆರೆಯ ಮಂಡಿಪೇಟೆಯಲ್ಲಿ ಚಿನ್ನದ ಅಂಗಡಿಯೊಂದರಲ್ಲಿ 18 ಲಕ್ಷ ರೂಪಾಯಿ ಕಳ್ಳತನವಾಗಿತ್ತು. ಆ ದಿನ ರಾತ್ರಿ ಮೂವರು ಕಾನ್ಸ್ ಟೇಬಲ್ ಗಳನ್ನು ಗಸ್ತು ಸೇವೆಗೆ ನಿಯೋಜಿಸಲಾಗಿತ್ತು. ಇಲಾಖೆ ತನಿಖೆಯಲ್ಲಿ ಕರ್ತವ್ಯ ಲೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮೂವರನ್ನು ಸಸ್ಪೆಂಡ್ ಮಾಡಲಾಗಿದೆ.



