ದಾವಣಗೆರೆ: 2024 ನೇ ಸಾಲಿನ ಗೌರವಾನ್ವಿತ ರಾಷ್ಟ್ರಪತಿ ಶ್ಲಾಘನೀಯ ಪೊಲೀಸ್ ಸೇವಾ ಪದಕಕ್ಕೆ ಭಾಜನರಾದ ಜಿಲ್ಲೆಯ ಬೆರಳು ಮುದ್ರೆ ಘಟಕದ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಎಸ್. ಕಲ್ಲೇದೇವರ ಅವರಿಗೆ ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿಗಳಾದ ವಿಜಯಕುಮಾರ ಎಂ ಸಂತೋಷ್ ಮತ್ತು ಜಿ ಮಂಜುನಾಥ ಅವರು ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆ ತಿಳಿಸಿದ್ದಾರೆ.
ಪೊಲೀಸ್ ಉಪನಿರೀಕ್ಷಕ ಮಂಜುನಾಥ ಎಸ್. ಕಲ್ಲೇದೇವರ, 2002 ನೇ ಬ್ಯಾಚ್ ನ ಬೆರಳು ಮುದ್ರೆ ಘಟಕದ ಪಿ ಎಸ್ ಐ ಆಗಿ ನೇಮಕ ಹೊಂದಿದ್ದು, ಹಾವೇರಿ ಜಿಲ್ಲೆ, ಬೆಳಗಾವಿ ನಗರ, ಬೆಂಗಳೂರು ಸಿಟಿ, ನಂತರ ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಯ ಬೆರಳು ಮುದ್ರೆ ಘಟಕದಲ್ಲಿ ಪಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಜುನಾಥ ಎಸ್ ಕಲ್ಲೇದೇವರ ದಾವಣಗೆರೆ ಜಿಲ್ಲೆಯಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿತರುಗಳ ಪತ್ತೆಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಇವರಿಗೆ 2017 ರಲ್ಲಿ ಅತ್ಯುತ್ತಮ ಸೇವೆಗೆ ನೀಡಲಾಗುವ ಕರ್ನಾಟಕ ಸರಕಾರದ ಮಾನ್ಯ ಮುಖ್ಯ ಮಂತ್ರಿ ಪದಕಕ್ಕೆ ಭಾಜನರಾಗಿದ್ದರು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.



