Connect with us

Dvgsuddi Kannada | online news portal | Kannada news online

ದಾವಣಗೆರೆ: ಟ್ರ್ಯಾಕ್ಟರ್ ಗಳಿಗೆ ರೆಡಿಯಂ ಸ್ಟಿಕ್ಕರ್ ಅಂಟಿಸಿ ಸಂಚಾರ ನಿಯಮಗಳ ಜಾಗೃತಿ

davangere police 2

ಚನ್ನಗಿರಿ

ದಾವಣಗೆರೆ: ಟ್ರ್ಯಾಕ್ಟರ್ ಗಳಿಗೆ ರೆಡಿಯಂ ಸ್ಟಿಕ್ಕರ್ ಅಂಟಿಸಿ ಸಂಚಾರ ನಿಯಮಗಳ ಜಾಗೃತಿ

ದಾವಣಗೆರೆ: ಸಂಚಾರ ನಿಯಮಗಳ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವತಿಯಿಂದ ಟ್ರ್ಯಾಕ್ಟರ್ ಗಳಿಗೆ ಅಪಘಾತ ತಡೆಗಟ್ಟುವ ರೆಡಿಯಂ ಸ್ಟಿಕ್ಕರ್ ಗಳನ್ನು ಅಂಟಿಸಿ ಜಾಗೃತಿ ಮೂಡಿಸಲಾಯಿತು.

ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ ಸಂತೋಷ ಮಾರ್ಗದರ್ಶನದಲ್ಲಿ ಚನ್ನಗಿರಿ ಪಟ್ಟಣದಲ್ಲಿ ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು. ವಾಹನ ಸವಾರರಿಗೆ ಸಂಚಾರ ನಿಯಮಗಳ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಯಿತು.

ಚನ್ನಗಿರಿ ಪಟ್ಟಣದಲ್ಲಿ ಸುಮಾರು 60 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸ್ ವತಿಯಿಂದ ರೆಡಿಯಂ ಸ್ಟಿಕ್ಕರ್ ಗಳನ್ನು ಅಂಟಿಸಲಾಯಿತು.ಇನ್ನೂ ಮುಂದೆಯೂ ಇದೇ ರೀತಿಯ ಕಾರ್ಯಚರಣೆಯು ಚನ್ನಗಿರಿ ಪಟ್ಟಣದಲ್ಲಿ ನಡೆಯಲಿದ್ದು ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನದ ಇನ್ಶೂರೆನ್ಸ್, ಹೊಂದಿರಬೇಕು.

ವಾಹನಗಳಲ್ಲಿ ಕರ್ಕಶ ದ್ವನಿ ಸೂಸುವ ಸೈಲೆನ್ಸರ್ (Defective Silencers), ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns) ಗಳನ್ನು ಹಾಕಬಾರದು ಹಾಗೂ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸ ಬೇಕು, ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು, ವಾಹನ ಸವಾರರು ಸೀಟ್ ಬ್ಯಾಲ್ಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ವಾಹನ ಚಾಲನೆ ಮಾಡುವ ಎಲ್ಲರೂ ಪಾಲಿಸಬೇಕು – ಒಂದು ವೇಳೆ ಸಂಚಾರ ನಿಯಮ ಪಾಲಿಸದೇ ಹೋದರೆ ಅಂತಹ ಚಾಲಕರ ಮೇಲೆ ಸೂಕ್ತ ಕ್ರಮಜರುಗಿಸಲಾಗುವದು ಎಂದು ಡಿವೈಎಸ್ಪಿ ಶ್ರೀ ರುದ್ರಪ್ಪ ಉಜ್ಜಿನಕೊಪ್ಪ ರವರು ತಿಳಿಸಿದರು.

ಈ ಸಂಧರ್ಭದಲ್ಲಿ ಪೊಲೀಸ್ ನಿರೀಕ್ಷಕ ಲಿಂಗನಗೌಡ ನೆಗಳೂರು, ಪಿಎಸ್ಐ ಗುರುಶಾಂತಪ್ಪ ಹಾಗೂ ರೂಪ್ಲಿಬಾಯಿ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top