Connect with us

Dvgsuddi Kannada | online news portal | Kannada news online

ದಾವಣಗೆರೆ: ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ದೇಹ ತೂಕ ನಿಯಂತ್ರಿಸಲು ಸೈಕಲ್ ಜಾಥಾ

ದಾವಣಗೆರೆ

ದಾವಣಗೆರೆ: ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ದೇಹ ತೂಕ ನಿಯಂತ್ರಿಸಲು ಸೈಕಲ್ ಜಾಥಾ

ದಾವಣಗೆರೆ: ಪೊಲೀಸ್ ಇಲಾಖೆಯ ಕೇಂದ್ರ ಕಚೇರಿ ಆದೇಶದಂತೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಗಳಲ್ಲಿ ಆರೋಗ್ಯಕರ ದೇಹದ ತೂಕ ನಿಯಂತ್ರಿಸುವಲ್ಲಿ (BMI ) ಕೆಲವೊಂದು ಸೂಚನೆಗಳನ್ನು ನೀಡಲಾಗಿದ್ದು, ಇಂದು (ಏ.25) ಚನ್ನಗಿರಿ ಠಾಣೆಯ ವತಿಯಿಂದ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ 20 ಕಿ.ಮೀ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು.

ಸಿಬ್ಬಂದಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರತಿ ದಿನ 1 ಘಂಟೆ ವಾಕಿಂಗ್, ಸೈಕ್ಲಿಂಗ್, ಜಾಗಿಂಗ್ ಅಥವಾ ಎಕ್ಸರ್ಸೈಜ್ ಮಾಡಲು ಸೂಚಿಸಿದ್ದು,ಜೋಳದಾಳ್ ಚೆಕ್ ಪೋಸ್ಟ್ ಗೆ ಭೇಟಿ ನೀಡಿ, ಹಗಲಿರುಳು ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ , ಅಲ್ಪೋಪಹಾರ ಸೇವಿಸಿ , ಇನ್ನಷ್ಟು ದಿನ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹಿಸಿದರು.

ಈ ಜಾಥಾದಲ್ಲಿ ಎಆರ್ ಓ ರವಿಕುಮಾರ್, ಡಿವೈಎಸ್ಪಿ ಪ್ರಶಾಂತ ಮುನ್ನೊಳಿ, ತಾಲೂಕ್ ದಂಡಾಧಿಕಾರಿ ಯರ್ರಿಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ನಿರಂಜನ್, ಬಿ ಈ ಓ ಜಯಪ್ಪ, ಅರಣ್ಯ ಇಲಾಖೆಯ ಆರ್ ಎಫ್ ಓ ಜಗದೀಶ್, ಮಧು , ಕಂದಾಯ ನಿರೀಕ್ಷಕರು ಮತ್ತು ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top