ದಾವಣಗೆರೆ: ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ದಂಡ ಪಾವತಿಸುವ ವ್ಯವಸ್ಥೆಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.
ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ನಮ್ಮ ಟ್ರಾಫಿಕ್ ಸಿಬ್ಬಂದಿಗೆ ಕ್ಯೂಆರ್ ಕೋಡ್ ನೀಡಲಾಗುತ್ತಿದ್ದು, ವಾಹನ ಸವಾರರು ದಂಡ ಪಾವತಿಸುವಾಗ ಅದನ್ನು ಸ್ಕ್ಯಾನ್ ಮಾಡಬೇಕು. ಹಣ ಪಾವತಿಸಿದ್ದಕ್ಕೆ ಅವರಿಗೆ ಮೆಸೇಜ್ ಬರುತ್ತದೆ ಎಂದು ತಿಳಿಸಿದರು.
ನಗರದ ದೇವತೆ ದುಗ್ಗಮ್ಮ ದೇವಸ್ಥಾನ ದಲ್ಲಿ
ಇ-ಹುಂಡಿ ಸ್ಥಾಪನೆ ಠಗಿದ್ದು, ಇದರಿಂದ ದೇವಸ್ಥಾನಗಳ ಹುಂಡಿ ಕಳ್ಳತನ ಪ್ರಕರಣಗಳು ಇರುವುದಿಲ್ಲ. ಭಕ್ತರು ನೀಡಿದ ಹಣ ಸುರಕ್ಷಿತವಾಗಿರುತ್ತದೆ ಎಂದರು.