ದಾವಣಗೆರೆ: ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಡ್ರಗ್ಸ್ ಬಗ್ಗೆ ಅರಿವು ಮೂಡಿಸಲು 10ಕೆ ಮತ್ತು 5ಕೆ ಮೀಟರ್ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲಾಖೆ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ 10 ಕೆ ಮತ್ತು 5 ಕೆ ಮೀಟರ್ ಮ್ಯಾರಥಾನ್ ಓಟದ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಕೀಲರು, ಪತ್ರಕರ್ತರು, ವಿದ್ಯಾರ್ಥಿ, ಯುವ ಜನರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ ಎಂದರು.
ಆನ್ ಲೈನ್ ಕ್ಯೂ ಆರ್ ಕೋಡ್ ಮೂಲಕ 650ಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಸಿದ್ದು, 200ಕ್ಕೂ ಹೆಚ್ಚು ಜನ 10 ಸಾವಿರ ಮೀಟರ್ ಓಟದಲ್ಲಿ, 500 ಜನರು 5 ಸಾವಿರ ಮೀಟರ್ ಓಟದಲ್ಲಿ ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ಸ್ಪರ್ಧಾ ಮನೋಭಾವದಿಂದ ಮ್ಯಾರಥಾನ್ ಓಟದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮಾತನಾಡಿ, ಪೊಲೀಸ್ ಇಲಾಖೆಯ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ದಾವಣಗೆರೆ ಜಿಲ್ಲಾ ಪೊಲೀಸ್ ಇಲಖೆಯಿಂದ 5 ಸಾವಿರ ಮೀಟರ್ ಮತ್ತು 10 ಸಾವಿರ ಮೀಟರ್ ಓಟ ಆಯೋಜಿಸಿದೆ. ಓಟದ ಜೊತೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕೆಲಸ ಇದಾಗಿದೆ ಎಂದು ಹೇಳಿದರು.
10ಕೆ, 5ಕೆ ಮ್ಯಾರಥಾನ್ ಓಟದ ಸ್ಪರ್ಧೆ ವಿಜೇತರ ಪಟ್ಟಿ: ಪೊಲೀಸ್ ಪುರುಷ ವಿಭಾಗ: 10ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ- ಕೆ.ಪಿ.ತಿಮ್ಮರಾಜು (ನ್ಯಾಮತಿ ಪೊಲೀಸ್ ಠಾಣೆ), ದ್ವಿತೀಯ- ಮಲ್ಲಿಕಾರ್ಜುನ, (ಡಿಎಆರ್ ದಾವಣಗೆರೆ), ತೃತೀಯ- ಜಯ್ಯಣ್ಣ, (ಡಿಎಆರ್ ದಾವಣಗೆರೆ).
5ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ: ಅಜ್ಜಯ್ಯ(ಬಡಾವಣೆ ಪೊಲೀಸ್ ಠಾಣೆ), ದ್ವಿತೀಯ – ಶ್ರೀಶೈಲ, (ಡಿಎಆರ್ ದಾವಣಗೆರೆ) ತೃತೀಯ- ಹೇಮಣ್ಣ ಮತ್ತು ಮಂಜುನಾಥ. ಪೊಲೀಸ್ ಮಹಿಳಾ ವಿಭಾಗ- 10ಕೆ ಮ್ಯಾರಥಾನ್ ಓಟ ಸ್ಪರ್ಧೆ ಪ್ರಥಮ -ಮಧುರಾ(ಮಹಿಳಾ ಪೊಲೀಸ್ ಸಿಬ್ಬಂದಿ).
5ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ – ಮಾಲತಿ (ಬಡಾವಣೆ ಪೊಲೀಸ್ ಠಾಣೆ), ದ್ವಿತೀಯ- ಶ್ವೇತಾ (ಹರಿಹರ ಪೊಲೀಸ್ ಠಾಣೆ).
ಸಾರ್ವಜನಿಕ ಪುರುಷ ವಿಭಾಗ- 10ಕೆ ಮ್ಯಾರಥಾನ್ ಓಟ ಸ್ಪರ್ಧೆ : ಪ್ರಥಮ – ಪ್ರಭು ಲಮಾಣಿ, ದ್ವಿತೀಯ – ದೇವರಾಜ, ತೃತೀಯ- ಪ್ರವೀಣ್ ಎ.ಕೆ.ಕಾಡಜ್ಜಿ.ಸಾರ್ವಜನಿಕ ಪುರುಷ 5ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ – ನೀಲಪ್ಪ, ದ್ವಿತೀಯ – ಪ್ರಮೋದ್ ಭಜಂತ್ರಿ, ತೃತೀಯ- ರಮೇಶ್.
ಸಾರ್ವಜನಿಕ ಮಹಿಳಾ ವಿಭಾಗ- 10ಕೆ ಮ್ಯಾರಥಾನ್ ಓಟ ಸ್ಪರ್ಧೆ: ಪ್ರಥಮ – ಎ.ಅಕ್ಷತಾ, ದ್ವಿತೀಯ – ಎಂ.ರೇಖಾ, ತೃತೀಯ – ಕೆ.ಹರ್ಪಿತಾ.ಸಾರ್ವಜನಿಕ ಮಹಿಳಾ ವಿಭಾಗದ 5ಕೆ ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ವಿಜೇತರಾದವರು ಪ್ರಥಮ- ಪದ್ಮಶ್ರೀ, ದ್ವಿತೀಯ – ಮಮತಾ, ತೃತೀಯ- ಖುಷಿ ಮತ್ತು ಶಿವಬಸಮ್ಮ ಕಲಕೋಟೆ ಇವರುಗಳು ಬಹುಮಾನ ಗಳಿಸಿದ್ದಾರೆ.
ವಿಜೇತರಿಗೆ ಪೂರ್ವವಲಯ ಐಜಿಪಿ ಡಾ.ಕೆ ತ್ಯಾಗರಾಜನ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ವಿಜೇತರಾದವರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಶಂಸನಾ ಪತ್ರ ವಿತರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಜಿ.ಸಂತೋಷ, ಹಿರಿಯ ಪತ್ರಕರ್ತರಾದ ಎಂ.ವೈ.ಸತೀಶ, ಎಚ್.ಎಂ.ಪ್ರಶಾಂತಕುಮಾರ ಇತರರು ಇದ್ದರು.