ದಾವಣಗೆರೆ: ನಗರದಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆರ್.ಎಂ.ಸಿ. ರಸ್ತೆ, 1ನೇ ಕ್ರಾಸ್ ನಿವಾಸಿಯಾಗಿದ್ದು, ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಜಯರಾಜ್ ಕೆ (21) ವಶಕ್ಕೆ ಪಡೆಯಲಾಗಿದೆ. ಬಸವನಗರ ಪೊಲೀಸ್ ಠಾಣೆ ಯಲ್ಲಿ ಸುಲಿಗೆ ಮಾಡಿದ 1200 -ರೂ ನಗದು ಹಣ ಅಮಾನತ್ತು ಪಡಿಸಿಕೊಂಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆಜಾದ್ ನಗರ ಪೊಲೀಸ್ ಠಾಣಾ ಸರಹದ್ದಿನ ದೇವರಾಜ್ ಬೋರ್ ವೆಲ್ ಬಳಿಯ ಆರ್.ಎಂ.ಸಿ ಲಿಂಕ್ ರಸ್ತೆಯಲ್ಲಿ ಈ ಪ್ರಕರಣದ ಪಿರ್ಯಾದಿಯು ತನ್ನ ಬೈಕ್‌ನ್ನು ನಿಲ್ಲಿಸಿಕೊಂಡು ಬೈಕ್ ಮೇಲೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ, ಇಬ್ಬರು ಆಸಾಮಿಗಳು ಬಂದು ಪಿರ್ಯಾದಿಯ ಎಡಕಿವಿಗೆ ಕೈಯಿಂದ ಬಲವಾಗಿ ಹೊಡೆದಾಗ ಪಿರ್ಯಾದಿಯ ಬೈಕ್ ಸಮೇತವಾಗಿ ಕೆಳಗಡೆ ಬಿದ್ದಾಗ, ಆ ಬೈಕನ್ನು ಆರೋಪಿತರು ತೆಗೆದುಕೊಂಡು ಹೋಗಿದ್ದು ಇರುತ್ತದೆ.
ಇದಲ್ಲದೆ ಬಸವನಗರ ಪೊಲೀಸ್ ಠಾಣೆ ಸರಹದ್ದಿನ ಬಿ ಟಿ ಲೇಔಟ್ ಹತ್ತಿರದ ರೈಲ್ವೇ ಹಳಿಗಳ ಪಕ್ಷದಲ್ಲಿ ಜಾಲಿ ಗಂಡ ಗಂಟೆಗಳು ಬೆಳೆದಿರುವ ನಿರ್ಜನ ಪ್ರದೇಶದಲ್ಲಿ ನಡೆದು
ಮೂತ್ರ ವಿಸರ್ಜನೆಗೆಂದು ಹೋಗಿದ್ದ ಪಿರ್ಯಾದಿಗೆ ಕಲ್ಲಿನಿಂದ ಹೊಡೆದು ಆತನ ಬಳಿ ಇದ್ದ 6000/-ರೂ ನಗದು ಹಣವನ್ನು ಕಿತ್ತುಕೊಂಡು ಹೋಗಿದ್ದು ಇರುತ್ತದೆ.
ಈ ಪ್ರಕರಣಗಳ ಆರೋಪಿತರ ಪತ್ತೆಗಾಗಿ ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ ತಾಮ್ರಧ್ವಜ ಇವರ ಮಾರ್ಗದರ್ಶನದಲ್ಲಿ ಆಜಾದ್ ನಗರ ವೃತ್ತದ ಗಜೇಂದ್ರಪ್ಪ.ಕೆ.ಎನ್ ರವರ ನೇತೃತ್ವದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ಪಿಎಸ್ ಐ ತಿಪ್ಪೇಸ್ವಾಮಿ ಟಿ.ಎನ್, ಅಕ್ಬರ್ ಮುಲ್ಲಾ ರವರು ಮತ್ತು ಸಿಬ್ಬಂದಿ ಹೆಚ್ ನಿಜಲಿಂಗಪ್ಪ, ಸುರೇಶ್ ಎಸ್.ವಿ, ದ್ಯಾಮೇಶ್, ಸಲಹದ್ದಿನ್, ನಾಗರಾಜ ರವರ ತಂಡ ದಾಳಿ ಮಾಡಿ ಆರೋಪಿ ಪತ್ತೆ ಮಾಡಿದ್ದಾರೆ.
ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ ರಿಷ್ಯಂತ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರು ಶ್ಲಾಘಿಸಿರುತ್ತಾರೆ.



